Categories: ದೆಹಲಿ

ಒಮಿಕ್ರಾನ್‌ ಭೀತಿ: ಅಂತರರಾಷ್ಟ್ರೀಯ ವಿಮಾನಯಾನ ಪುನರಾರಂಭಕ್ಕೆ ತಡೆ

ನವದೆಹಲಿ : ಕೊರೊನಾದ ಹೊಸ ಅಪಾಯಕಾರಿ ರೂಪಾಂತರಿ ಒಮಿಕ್ರಾನ್‌ ದೇಶಕ್ಕೆ ವಕ್ಕರಿಸುವ ಆತಂಕದ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ವಿಮಾನಗಳನ್ನ ಪುನರಾರಂಭಿಸಲು ಈ ಹಿಂದೆ ನಿಗದಿ ಪಡೆಸಲಾಗಿದ್ದ ದಿನಾಂಕವನ್ನ ತಡೆ ಹಿಡಿದಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಅಂದ್ಹಾಗೆ, ಈ ಹಿಂದೆ ಡಿಸೆಂಬರ್‌ 15ರಿಂದ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿತ್ತು. ಆದ್ರೆ, ಈಗ ಡಿಸೆಂಬರ್ 15 ದಿನಾಂಕ ಅನ್ವಯಿಸುವುದಿಲ್ಲ. ಒಮಿಕ್ರಾನ್ ಪರಿಸ್ಥಿತಿಯ ಆಧಾರದ ಮೇಲೆ ಸರ್ಕಾರ ಹೊಸ ದಿನಾಂಕವನ್ನ ಘೋಷಿಸಲಿದೆ.

ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ, ‘ಭಾರತಕ್ಕೆ/ಅಲ್ಲಿಂದ ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನ ಸೇವೆಗಳನ್ನ ಪುನರಾರಂಭಿಸುವ ದಿನಾಂಕದಂದು ತನ್ನ ನಿರ್ಧಾರವನ್ನ ಸೂಕ್ತ ಸಮಯದಲ್ಲಿ ತಿಳಿಸುವುದಾಗಿ’ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ. ಹೊಸ ಕೋವಿಡ್ ರೂಪಾಂತರದ ಉಗಮದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದವ್ರು ತಿಳಿಸಿದ್ದಾರೆ.

Gayathri SG

Recent Posts

ಬಸ್‌,ಲಾರಿ ನಡುವೆ ಭೀಕರ ಅಪಘಾತ : ಹೊತ್ತಿ ಉರಿದ ವಾಹನ, 6 ಮಂದಿ ಸಾವು

ಬಸ್‌ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡ ಪರಿಣಾಮ 6 ಮಂದಿ ಸಜೀವ ದಹನಹೊಂದಿರುವ ಘಟನೆ ಘಟನೆ…

6 mins ago

ʼನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಬಂಡಾಯ, ಪಕ್ಷೇತರ ಸ್ಫರ್ಧೆ ಅಲ್ಲ ಶಿಕ್ಷಕ ಪ್ರತಿನಿಧಿಯಾಗಿ ಸ್ಫರ್ಧೆʼ

ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗೆ ಈ ಬಾರಿ ಕರಾವಳಿ ಜಿಲ್ಲೆೆಯನ್ನು ಕಡೆಗಣಿಸಲಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು…

11 mins ago

ತರಕಾರಿ, ಬೇಳೆ ಕಾಳು, ಹಣ್ಣು, ಮಾಂಸ ದರ ಭಾರೀ ಏರಿಕೆ

ತಾಪಮಾನ ಏರಿಕೆ, ನೀರಿನ ಕೊರತೆ ಮೊದಲಾದ ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ, ಮಧ್ಯಮ ವರ್ಗದವರು…

45 mins ago

ತಾಮ್ರದ ಗಣಿಯೊಳಗೆ ಸಿಲುಕಿದ್ದ 14 ಅಧಿಕಾರಿಗಳ ರಕ್ಷಣೆ

ಕೋಲಿಹಾನ್‌ನ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ ಗಣಿಯಲ್ಲಿ ಲಿಫ್ಟ್ ಹಗ್ಗ ಮುರಿದು ಗಣಿಯೊಳಗೆ ಸಿಲುಕಿಗೊಂಡಿದ್ದ 14 ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ತಡರಾತ್ರಿ…

49 mins ago

ಬೆಳ್ಳಂಬೆಳಗ್ಗೆ ಹರಿದ ನೆತ್ತರು : ಪಾಗಲ್‌ ಪ್ರೇಮಿಯಿಂದ ಯುವತಿಯ ಹತ್ಯೆ

ಬೆಳ್ಳಂಬೆಳಗ್ಗೆ ಮನೆಯಲ್ಲಿ ಮಲಗಿದ್ದ ಯುವತಿಗೆ ಚಾಕು ಇರಿದು ಕೊಲೆ ಮಾಡಿ ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ.

1 hour ago

ತಾಮ್ರದ ಗಣಿ ಪರಿಶೀಲನೆಗೆ 1,800 ಅಡಿ ಆಳಕ್ಕೆ ಹೋದ 14 ಮಂದಿ ಟ್ರ್ಯಾಪ್

 ರಾಜಸ್ಥಾನದ ಜುಂಜುನುದಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಮಂಗಳವಾರ ರಾತ್ರಿ ಲಿಫ್ಟ್​ ಚೈನ್ ತುಂಡಾಗಿ ಗಣಿ ತಪಾಸಣೆಗೆಂದು ಹೋದ…

2 hours ago