ನವದೆಹಲಿ : ಉಗ್ರ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ಟೀಮ್ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಾಂಗ್ಲಾ ಪ್ರಜೆ ಸೇರಿದಂತೆ ಐವರನ್ನು ಅಸ್ಸಾಂನ ಬರ್ಪೇಟಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬಾಂಗ್ಲಾದೇಶದ ಪ್ರಜೆಯಾಗಿರುವ ಸೈಫುಲ್ ಇಸ್ಲಾಂ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಆತ ಬರ್ಪೇಟಾ ಜಿಲ್ಲೆಯ ಮಸೀದಿಯೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಲ್-ಖೈದಾದ ನಂಟು ಹೊಂದಿರುವ ಸಂಘಟನೆಯ ಕಾನೂನುಬಾಹಿರ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಈ ಐವರು ಯಶಸ್ವಿಯಾಗಿ ತರಬೇತಿ ಪಡೆದಿದ್ದರು ಎಂದು ಮಹಾಂತ ಹೇಳಿದ್ದಾರೆ.