News Karnataka Kannada
Tuesday, May 07 2024
ದೆಹಲಿ

ಇಂಧನ ದರ ಏರಿಕೆ: ಇಂದಿನಿಂದ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಚಾಲಕರ ಮುಷ್ಕರ

Auto
Photo Credit :

ನವದೆಹಲಿ : ವಾಹನಗಳ ಇಂಧನ ದರ ಏರಿಕೆಯನ್ನು ವಿರೋಧಿಸಿ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಹಾಗೂ ಮಿನಿ ಬಸ್‌ ಡ್ರೈವರ್‌ಗಳು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ದೆಹಲಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಜೊತೆಗೆ ಆಟೊ ಮತ್ತು ಟ್ಯಾಕ್ಸಿಗಳಿಗೆ ಇಂಧನವಾಗಿ ಬಳಸಲಾಗುತ್ತಿರುವ ಸಿಎನ್‌ಜಿ ದರದಲ್ಲೂ ಹೆಚ್ಚಳವಾಗಿದೆ. ವಾಹನ ಚಾಲಕರ ಒಕ್ಕೂಟಗಳು ಆಟೊ ಮತ್ತು ಟ್ಯಾಕ್ಸಿ ಮೀಟರ್ ದರ ಹೆಚ್ಚಿಸಲು ಬೇಡಿಕೆ ಇಟ್ಟಿದ್ದಾರೆ. ಅದರೊಂದಿಗೆ ಸಿಎನ್‌ಜಿ ದರ ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ.

ದರ ಪರಿಷ್ಕರಣೆಗಾಗಿ ಸಮಿತಿ ರೂಪಿಸುವ ಬಗ್ಗೆ ದೆಹಲಿ ಸರ್ಕಾರವು ಪ್ರಕಟಿಸಿದ್ದರೂ ಒಕ್ಕೂಟಗಳು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯಲು ನಿರಾಕರಿಸಿವೆ.

ಪ್ರತಿ ಕೆ.ಜಿ. ಸಿಎನ್‌ಜಿಗೆ ಸರ್ಕಾರವು (ಕೇಂದ್ರ ಮತ್ತು ರಾಜ್ಯ ) ₹35 ಸಬ್ಸಿಡಿ ನೀಡುವಂತೆ ಬೇಡಿಕೆ ಇಡಲಾಗಿದೆ. ಸಿಎನ್‌ಜಿ ದರದ ಮೇಲೆ ಸಬ್ಸಿಡಿ ನೀಡುವಂತೆ ಇತ್ತೀಚೆಗಷ್ಟೇ ದೆಹಲಿ ಕಾರ್ಯಾಲಯದ ಎದುರು ಆಟೊ, ಟ್ಯಾಕ್ಸಿ ಹಾಗೂ ಕ್ಯಾಬ್‌ ಚಾಲಕರು ಪ್ರತಿಭಟನೆ ನಡೆಸಿದ್ದರು.

ಪ್ರಸ್ತುತ ದೆಹಲಿಯಲ್ಲಿ ಪ್ರತಿ ಕೆ.ಜಿ. ಸಿಎನ್‌ಜಿ ದರ ₹71.61 ಇದೆ. ದೆಹಲಿಯಲ್ಲಿ ಸುಮಾರು 90,000 ನೋಂದಾಯಿತ ಆಟೊಗಳು, 80,000ಕ್ಕೂ ಹೆಚ್ಚು ಟ್ಯಾಕ್ಸಿಗಳಿವೆ. ಮೆಟ್ರೊ ನಿಲ್ದಾಣಗಳಿಂದ ನಗರದ ಒಳಭಾಗಗಳಿಗೆ ಸಂಚಾರ ನಡೆಸಲು ಆಟೊ ಮತ್ತು ಟ್ಯಾಕ್ಸಿ ಪ್ರಮುಖ ಸಾರಿಗೆ ವ್ಯವಸ್ಥೆಗಳಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು