News Karnataka Kannada
Monday, April 29 2024
ದೆಹಲಿ

ಇಂದು ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌

Ramnath Kovind
Photo Credit :

ನವದೆಹಲಿ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ದೇಶದ 28 ಸಾಧಕಿಯರಿಗೆ ಮಾ.8ರ ಮಹಿಳಾ ದಿನಾಚರಣೆಯಂದು ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರವರು ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ. 2020 ಹಾಗೂ 2021ನೇ ವರ್ಷಕ್ಕೆ ತಲಾ 14 ಸಾಧಕಿಯರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಒಟ್ಟು 28 ಪ್ರಶಸ್ತಿಗಳು ಪ್ರದಾನವಾಗಲಿದೆ.

“ವಯಸ್ಸು, ಭೌಗೋಳಿಕ ಅಡೆತಡೆಗಳು, ಸಂಪನ್ಮೂಲಗಳನ್ನು ಹೊಂದಲು ಇರುವ ಅಡ್ಡಿಗಳನ್ನು ಮೀರಿ ಈ ಸಾಧಕಿಯರು ಗಣನೀಯ ಸಾಧನೆ ಮಾಡಿದ್ದಾರೆ.

ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆ, ಸಮಾಜಕ್ಕೆ ಸ್ಫೂರ್ತಿಯಾಗಿದ್ದು, ಲಿಂಗಭೇದ, ಅಸಮಾನತೆಯ ಪಿಡುಗನ್ನು ತೊಡೆದುಹಾಕಲು ಶಕ್ತವಾಗಿವೆ” ಎಂದು ಪ್ರಶಸ್ತಿಗಳನ್ನು ವಿತರಿಸುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಈ ಮಹಿಳೆಯರನ್ನು ಬಣ್ಣಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು