News Karnataka Kannada
Monday, April 29 2024
ದೆಹಲಿ

ಅತ್ಯಾಚಾರ ಪ್ರಕರಣ ಹೆಚ್ಚಾಗಲು ಮೊಬೈಲ್ ಫೋನ್ ಕಾರಣ; ಸಚಿವ ಹರ್ಷ ಸಾಂಘ್ವಿ

Harsha Sagvi
Photo Credit :

ನವದೆಹಲಿ : ಭಾರತದಲ್ಲಿ ಮೊಬೈಲ್ ಫೋನ್ ಗಳಲ್ಲಿ ಸುಲಭವಾಗಿ ಅಶ್ಲೀಲ ವಿಡಿಯೋಗಳು ಲಭ್ಯವಾಗುತ್ತಿರುವುದು ಅತ್ಯಾಚಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ತಿಳಿಸಿರುವುದಾಗಿ ವರದಿ ಹೇಳಿದೆ.

ಭಾರತದಲ್ಲಿ ನೆರೆಹೊರೆಯವರಿಂದ, ಕುಟುಂಬ ಸದಸ್ಯರಿಂದಲೇ ಅತ್ಯಾಚಾರದ ಘಟನೆಗಳು ನಡೆಯುವ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಮೊಬೈಲ್ ಫೋನ್ ಮತ್ತು ಪರಿಚಿತ ವ್ಯಕ್ತಿಗಳೇ ಇಂತಹ ಕೃತ್ಯ ಎಸಗುತ್ತಿರುವುದು ಪ್ರಮುಖ ಕಾರಣ ಎಂದು ಇತ್ತೀಚೆಗೆ ಬಹಿರಂಗಗೊಂಡ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಸಾಂಘ್ವಿ ತಿಳಿಸಿದ್ದಾರೆ.

ಅತ್ಯಾಚಾರದ ಘಟನೆಗಳಿಗೆ ನಾವು ಯಾವಾಗಲೂ ಪೊಲೀಸರನ್ನು ದೂಷಿಸುತ್ತೇವೆ. ಆದರೆ ಇಂತಹ ಘಟನೆಗಳು ಸಮಾಜಕ್ಕೆ ಕಳಂಕ. ಇಂತಹ ಘಟನೆಗಳಿಗೆ ಕೇವಲ ಪೊಲೀಸರ ಮೇಲೆ ಮಾತ್ರ ದೂರುವುದು ಸರಿಯಲ್ಲ. ನಮ್ಮ ದೇಶದಲ್ಲಿ ಗುಜರಾತ್ ಸುರಕ್ಷಿತ ರಾಜ್ಯವಾಗಿದೆ ಎಂದರು.

ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದರೆ, ಇದೊಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗುವುದಿಲ್ಲವೇ? ಒಂದು ವೇಳೆ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದರೆ, ಅದಕ್ಕೆ ಕಾರಣ ಆತನ ಮೊಬೈಲ್ ಫೋನ್ ಎಂಬುದಾಗಿ ಸಾಂಘ್ವಿ ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು