ಚಂಡೀಗಢ: ಎಟಿಎಂಗಳಿಗೆ ಹಣಸಾಗಾಟ ಮಾಡುವ ಸಿಎಂಎಸ್ ಕಂಪನಿ ಕಚೇರಿಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು 7 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ದರೋಡೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಪಂಜಾಬ್ನ ಕೈಗಾರಿಕಾ ಪಟ್ಟಣ ಲುಧಿಯಾನದಲ್ಲಿರುವ ಖಾಸಗಿ ಹಣಕಾಸು ಸಂಸ್ಥೆಯೊಂದರ ಕಚೇರಿಗೆ ನುಗ್ಗಿದ 10 ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ಶನಿವಾರ 7 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ. ರಾಜಗುರುನಗರದ ಬಳಿ ಇರುವ ನಗದು ನಿರ್ವಹಣಾ ಸಂಸ್ಥೆಯಾದ ಸಿಎಂಎಸ್ ಕಂಪನಿಯ ಕಚೇರಿಯನ್ನು ಲೂಟಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ. ದರೋಡೆ ಮಾಡುವ ಮುನ್ನ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.