ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಮಗುವನ್ನು ಹತ್ಯೆಗೈದ ಮಹಿಳೆ 2014ರಿಂದಲೂ ಮಾನಸಿಕ ರೋಗದಿಂದ ಬಳಲುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಸಿದ್ದಾರೆ.
ಹಾಲಿಗಾಗಿ ಮಗು ನಿರಂತರವಾಗಿ ಹಠ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತ ಮಹಿಳೆ ಮಗುವಿನ ತಲೆಯನ್ನು ನೆಲಕ್ಕೆ ಚಚ್ಚಿದ್ದಾಳೆ. ಇದರಿಂದ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.