Categories: ದೇಶ

ಏಪ್ರೀಲ್‌ 1ರಿಂದ ಹಣಕಾಸು ನಿಯಮಗಳಲ್ಲಿಆಗುವ ಪ್ರಮುಖ ಬದಲಾವಣೆಗಳಿವು

ಬೆಂಗಳೂರು:  2023-24ರ ಹಣಕಾಸು ವರ್ಷ ಮುಗಿಯುತ್ತಿದೆ. 2024-25ರ ಹೊಸ ಹಣಕಾಸು ವರ್ಷ ಎಪ್ರಿಲ್ 1ರಂದು ಆರಂಭವಾಗುತ್ತದೆ. ಹೀಗಾಗಿ ಹೊಸ ಹಣಕಾಸು ನಿಯಮಗಳನ್ನು ಅಳವಡಿಸಲಾಗಿದೆ.ಆದಾಯ ತೆರಿಗೆ ನಿಯಮಗಳಿಂದ ಹಿಡಿದು ಫಾಸ್​ಟ್ಯಾಗ್​ವರೆಗೆ ಪ್ರಮುಖ ನಿಯಮ ಬದಲಾವಣೆ ಆಗಲಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಎನ್​ಪಿಎಸ್ ನಿಯಮದಲ್ಲಿ ಬದಲಾವಣೆ
ಎನ್​ಪಿಎಸ್ ಖಾತೆಗಳಿಗೆ ಲಾಗಿನ್ ಆಗಲು ಎರಡು ಎಳೆಯ ಭದ್ರತಾ ವ್ಯವಸ್ಥೆ ಇದೆ. ಇಲ್ಲಿಯವರೆಗೂ ನ್ಯಾಷನಲ್ ಪೆನ್ಷನ್ ಸಿಸ್ಟಂ ಅಕೌಂಟ್​ಗೆ ಲಾಗಿನ್ ಆಗಲು ಯೂಸರ್ ಐಡಿ ಮತ್ತು ಪಾಸ್ವರ್ಡ್ ಬೇಕಿತ್ತು. ಈಗ ಆಧಾರ್ ದೃಢೀಕರಣವನ್ನೂ ಪಡೆಯಬೇಕಾಗುತ್ತದೆ.

ಇಪಿಎಫ್​ಒ ಹೊಸ ನಿಯಮ
ಇಪಿಎಫ್ ಸದಸ್ಯರು ತಮ್ಮ ಕೆಲಸ ಬದಲಾವಣೆ ಮಾಡಿದಾಗ ಅವರ ಖಾತೆಯಲ್ಲಿರುವ ಹಣ ಹೊಸ ಸಂಸ್ಥೆಯ ಪಿಎಫ್ ಖಾತೆಗೆ ಸ್ವಯಂ ಆಗಿ ವರ್ಗಾವಣೆ ಆಗುತ್ತದೆ. ಇದರಿಂದ ಉದ್ಯೋಗಿಗಳ ಒಂದು ತಲೆನೋವು ಕಡಿಮೆ ಆಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿದ್ದರೆ ಅದನ್ನು ವಿಲೀನಗೊಳಿಸಲು ಇಪಿಎಫ್ ಸಬ್​ಸ್ಕ್ರೈಬರ್​ಗಳು ಮನವಿ ಸಲ್ಲಿಸಬೇಕಾಗಿದೆ.

ಫಾಸ್​ಟ್ಯಾಗ್ ನಿಯಮ
ಫಾಸ್​ಟ್ಯಾಗ್ ಇದ್ದಲ್ಲಿ ಅದರ ಕೆವೈಸಿಯನ್ನು ನೀವು ಅಪ್​ಡೇಟ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕುಗಳು ನಿಮ್ಮ ಫಾಸ್​ಟ್ಯಾಗ್ ಅನ್ನು ಡೀ ಆ್ಯಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಕೆವೈಸಿ ಅಪ್​ಡೇಟ್ ಆಗದ ಫಾಸ್​ಟ್ಯಾಗ್​ನ ಖಾತೆಯಲ್ಲಿ ಹಣ ಇದ್ದರೂ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆವೈಸಿ ಅಪ್​ಡೇಟ್ ಮಾಡಿರದಿದ್ದರೆ ಮಾರ್ಚ್ 31ರೊಳಗೆ ಅದನ್ನು ಮಾಡಿರಿ.

ಹೊಸ ಇನ್ಕಮ್ ಟ್ಯಾಕ್ಸ್ ಪದ್ಧತಿ ಡೀಫಾಲ್ಟ್?
2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜೊತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕಾಗುತ್ತದೆ.

 

Nisarga K

Recent Posts

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

8 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

23 mins ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

35 mins ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

2 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

2 hours ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

3 hours ago