News Karnataka Kannada
Saturday, May 04 2024
ದೇಶ

ಡೀಪ್​ಫೇಕ್ ಹಾವಳಿ: ಸೋಶಿಯಲ್ ಮೀಡಿಯಾಗೆ ಕೇಂದ್ರ ವಾರ್ನಿಂಗ್

Df
Photo Credit : News Kannada

ದೆಹಲಿ: ದೇಶದಲ್ಲಿ ಡೀಪ್​ಫೇಕ್ ವಿಡಿಯೋಗಳ ಹಾವಳಿ ಹೆಚ್ಚಾಗಿರುವ ಬಗ್ಗೆ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಗಳು ಕೇಳಿಬಂದಿದ್ದವು. ಬಿಗ್​​ಬಿ ಅಮಿತಾಬ್ ಬಚ್ಚನ್ ಸೇರಿದಂತೆ ದೇಶದ ಗಣ್ಯರು ಡೀಪ್​ಫೇಕ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಭಾರತ ಸರ್ಕಾರ ಇದೀಗ ಸೋಶಿಯಲ್ ಮೀಡಿಯಾಗೆ ಸುತ್ತೋಲೆ ಹೊರಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಡೀಪ್​ಫೇಕ್ ಹಾವಳಿ ನಿಯಂತ್ರಿಸಲು ಕಠಿಣ ಕ್ರಮ ತೆಗದುಕೊಳ್ಳಲು ಮುಂದಾಗಬೇಕು. ಅದಕ್ಕಾಗಿ ಐಟಿ ನಿಯಮಗಳನ್ನು ಪಾಲಿಸಬೇಕು ಎಂದು ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್​ ಅಂಡ್ ಇನ್ಫಾರ್ಮೇಷನ್ ಟೆಕ್ನೊಲಾಜಿ ಸಚಿವಾಲಯ ಸೂಚನೆ ನೀಡಿದೆ. ದೈಹಿಕ ಗೌಪ್ಯತೆ, ಖಾಸಗಿ ವಿಚಾರ, ಅಶ್ಲೀಲ ಕಂಟೆಂಟ್​ಗಳು ನಿಷೇಧ ಎಂದು ಐಟಿ ಆ್ಯಕ್ಟ್​ನ Rule 3(1)(b) ಹೇಳುತ್ತದೆ. ಅದರ ಅಡಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಸ್​ ಅದರ ಸೇವಾ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳ ಮೂಲಕ ನಿಯಮ 3 (1) (ಬಿ) ಅಡಿಯಲ್ಲಿ ಪಟ್ಟಿ ಮಾಡಲಾದ ನಿಷೇಧಿತ ವಿಷಯದ ಬಗ್ಗೆ ಬಳಕೆದಾರರಿಗೆ ತಿಳಿಸಬೇಕು. ಪ್ಲಾಟ್‌ಫಾರ್ಮ್ ನೋಂದಣಿ ಸಮಯದಲ್ಲೇ ಬಳಕೆದಾರರಿಗೆ ಅಂತಹ ನಿಷೇಧಿತ ವಿಷಯದ ಬಗ್ಗೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಬಳಕೆದಾರರು ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡಿದಾಗ ಮತ್ತು ಆಕ್ಷೇಪಾರ್ಗ ಕಂಟೆಂಟ್​ಗಳನ್ನು ಅಪ್​ಲೋಡ್ ಮಾಡಿದಾಗ ಅವರನ್ನು ಎಚ್ಚರಿಸುವ ಪ್ರಯತ್ನ ಮಾಡಬೇಕು. ಬಳಿಕ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು