News Karnataka Kannada
Monday, April 15 2024
Cricket
ದೇಶ

ಅಮೆರಿಕದಲ್ಲಿ ದಿವಾಳಿ ಅರ್ಜಿ ಸಲ್ಲಿಸಿದ ಬೈಜುಸ್

ಬೈಜುಸ್​ನ ಅಮೆರಿಕದ ಘಟಕವೊಂದು ಡೆಲವೇರ್ ಕೋರ್ಟ್​ವೊಂದರಲ್ಲಿ ದಿವಾಳಿ ತಡೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. ಬೈಜುಸ್​ನ ಆಲ್ಫಾ ಯೂನಿಟ್ ಸಲ್ಲಿಸಿದ ಅರ್ಜಿ ಅದು ತನ್ನ ಆಸ್ತಿಯ ಮೊತ್ತ 500 ಮಿಲಿಯನ್​ನಿಂದ 1 ಬಿಲಿಯನ್ ಡಾಲರ್​ವರೆಗೂ ಇರಬಹುದು ಎಂದು ಲೆಕ್ಕ ಕೊಟ್ಟಿದೆ.
Photo Credit : News Kannada

ಡೆಲವೇರ್: ಬೈಜುಸ್​ನ ಅಮೆರಿಕದ ಘಟಕವೊಂದು ಡೆಲವೇರ್ ಕೋರ್ಟ್​ವೊಂದರಲ್ಲಿ ದಿವಾಳಿ ತಡೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. ಬೈಜುಸ್​ನ ಆಲ್ಫಾ ಯೂನಿಟ್ ಸಲ್ಲಿಸಿದ ಅರ್ಜಿ ಅದು ತನ್ನ ಆಸ್ತಿಯ ಮೊತ್ತ 500 ಮಿಲಿಯನ್​ನಿಂದ 1 ಬಿಲಿಯನ್ ಡಾಲರ್​ವರೆಗೂ ಇರಬಹುದು ಎಂದು ಲೆಕ್ಕ ಕೊಟ್ಟಿದೆ.

ಇನ್ನು, ತನಗಿರುವ ಸಾಲವು 1 ಬಿಲಿಯನ್​ನಿಂದ 10 ಬಿಲಿಯನ್​ವರೆಗೂ ಇದೆ ಎಂದು ಹೇಳಿದ್ದು, ಸಾಲ ಕೊಟ್ಟವರ ಸಂಖ್ಯೆ 100ರಿಂದ 199 ಎಂದು ಮಾಹಿತಿ ನೀಡಿರುವುದು ತಿಳಿದುಬಂದಿದೆ.

ಭಾರತ ಮೂಲದ ಬೈಜುಸ್ ಅತ್ಯಂತ ಯಶಸ್ವಿ ಸ್ಟಾರ್ಟಪ್​ಗಳಲ್ಲಿ ಒಂದೆನಿಸಿತ್ತು. ಕೇರಳ ಮೂಲದ ಬೈಜು ರವೀಂದ್ರನ್ ಬೆಂಗಳೂರಿನಲ್ಲಿ ಸ್ಥಾಪಿಸಿದ ಈ ಸ್ಟಾರ್ಟಪ್ 2022ರಲ್ಲಿ 22 ಬಿಲಿಯನ್ ಡಾಲರ್​ನಷ್ಟು ವ್ಯಾಲ್ಯುಯೇಶನ್ ಪಡೆದಿತ್ತು. ಈ ಉಚ್ಛ್ರಾಯ ಸ್ಥಿತಿಯಿಂದ ಬೈಜುಸ್ ಇದೀಗ ಗಣನೀಯವಾಗಿ ಕುಸಿದಿದೆ. ಅದರ ಕೆಲ ಹೂಡಿಕೆದಾರರು ಬೈಜುಸ್​ನ ಮೌಲ್ಯವನ್ನು 1 ಬಿಲಿಯನ್ ಡಾಲರ್​ಗೆ ಇಳಿಸಿದ್ದಾರೆ. ಬೈಜುಸ್ ವಿರುದ್ಧ 2022ರ ನಂತರ ಕೆಲ ಬ್ಯಾಂಕಪ್ಸಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಜೊತೆಗೆ ತೆರಿಗೆ ಇಲಾಖೆಗಳ ದಾಳಿ ಇತ್ಯಾದಿ ಘಟನೆಗಳಿಂದ ಬೈಜುಸ್ ವಿವಾದ ಮತ್ತು ಕಷ್ಟದ ಸುಳಿಗೆ ಸಿಲುಕುತ್ತಲೇ ಬಂದಿದೆ.

ಸಾಲಗಾರರ ವಿಪರೀತ ಒತ್ತಡಕ್ಕೆ ಒಳಗಾಗಿರುವ ಬೈಜುಸ್​ನ ಆಲ್ಫಾ ಘಟಕವು ಅಮೆರಿಕದ ಡೆಲವೇರ್ ರಾಜ್ಯದ ಕೋರ್ಟ್​ನಲ್ಲಿ ದಿವಾಳಿ ತಡೆಗೆ ಅರ್ಜಿ ಸಲ್ಲಿಸಿ ನೆರವು ಯಾಚಿಸಿದೆ. ಹೆಚ್ಚುವರಿ ಷೇರುಗಳ ವಿತರಣೆ ಮೂಲಕ 200 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಲಾಗುವುದು. ಈ ಹಣವನ್ನು ತುರ್ತು ಸಾಲಗಳಿಗೆ ಮತ್ತು ಸಂಸ್ಥೆಯ ಕಾರ್ಯನಿರ್ವಹಣೆಗೆ ಬಳಸಲಾಗುವುದು ಎಂದು ಬೈಜುಸ್ ತನ್ನ ಅರ್ಜಿಯಲ್ಲಿ ವಿವರಿಸಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು