ಬಿಹಾರ: 40 ವರ್ಷದ ಶಿಕ್ಷಕಿ 20 ವರ್ಷ ವಿದ್ಯಾರ್ಥಿಯನ್ನು ವಿವಾಹವಾಗಿರುವ ಪ್ರಸಂಗ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಸದ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿ ಮದುವೆಯಾದ ವಿಡಿಯೋ ವೈರಲ್ ಆಗಿದೆ.
40 ವರ್ಷದ ಶಿಕ್ಷಕಿ ಮಧು ಮಗಳಂತೆ ಸಿಂಗಾರಗೊಂಡು, ವಿದ್ಯಾರ್ಥಿ ಸಿಂಪಲ್ಲಾಗಿ ಬಟ್ಟೆ ಧರಿಸಿದ್ದಾನೆ. ಅತ್ತ ವಿದ್ಯಾರ್ಥಿ ಮತ್ತು ಟೀಚರ್ ವಿವಾಹ ಲವ್ ಮ್ಯಾರೇಜ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ದೃಶ್ಯದಲ್ಲಿ ವಿಡಿಯೋ ಚಿತ್ರೀಕರಿಸುವ ವ್ಯಕ್ತಿಯೊಬ್ಬ ಹಾಡನ್ನು ಹಾಡುತ್ತಿರುವುದು ಕೇಳಿಬಂದಿದೆ.
ಮತ್ತೊಂದೆಡೆ ಟ್ವಿಟ್ಟರ್ನಲ್ಲಿ 40 ವರ್ಷದ ಶಿಕ್ಷಕಿ ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಹುಡುಗನನ್ನು ವಿವಾಹವಾಗಿದ್ದಕ್ಕೆ ಚರ್ಚೆ ಹುಟ್ಟುಹಾಕಿದೆ. ಆದರೆ ಕೆಲವರು ಪ್ರೀತಿ ಅವೆಲ್ಲವನ್ನ ಮರೆಸುತ್ತದೆ ಎಂದು ಬರೆದಿದ್ದಾರೆ.
"Love is Blind" "Unique Love Story"
Woman of 40 married 20 year old boy.
Societal mongers question Indian culture.
Love can transcend cultural norms.
Love evolves the dynamics of relationships. #Samastipur_Bihar pic.twitter.com/3RNkQ6WfSE— Nadeem Khorajia (@NadeemKhorajia) January 3, 2024