News Karnataka Kannada
Monday, April 29 2024
ಬಿಹಾರ

ಭಾರತದಲ್ಲಿ ಅಕ್ರಮವಾಗಿ ವಾಸಿಸುತಿದ್ದ ಇಬ್ಬರ ಬಂಧನ

Ex-DGP sentenced to three years in jail for sexually harassing woman officer
Photo Credit :

ಬಿಹಾರ: ವೀಸಾ ಇಲ್ಲದೆ ಭಾರತಕ್ಕೆ ನುಸುಳಿ ದೆಹಲಿ-ಎನ್‍ಸಿಆರ್ ಪ್ರದೇಶದಲ್ಲಿ ವಾಸಿಸುತ್ತಿದ್ದು , ಅಲ್ಲಿಂದ ನೇಪಾಳಕ್ಕೆ ಪ್ರಯಾಣಿಸಲು ಯತ್ನಿಸಿದ್ದ ಇಬ್ಬರು ಚೀನಾ ಪ್ರಜೆಗಳನ್ನು  ಬಿಹಾರದಲ್ಲಿ ಸೋಮವಾರ ಬಂಧಿಸಲಾಗಿದೆ.

ವಿದೇಶಿಗರನ್ನು ಸಶಸ್ತ್ರ ಸೀಮಾ ಬಾಲ್ (ಎಸ್‍ಎಸ್‍ಬಿ) ಸಿಬ್ಬಂದಿ ಭಾನುವಾರ ಬಂಧಿಸಿದ್ದಾರೆ, ಎಂದು  ಪೊಲೀಸ್ ವರಿಷ್ಠಾಧಿಕಾರಿ ಹರ್ಕಿಶೋರ್ ರೈ ಸೀತಾಮರ್ಹಿಯ  ಅವರು ಮಾಹಿತಿ ನೀಡಿದ್ದಾರೆ.

ಲು ಲ್ಯಾಂಗ್ (28) ಮತ್ತು ಯುವಾನ್ ಹೈಲಾಂಗ್ (34) ಅವರು ವೀಸಾ ಹೊಂದಿಲ್ಲದಿದ್ದರೂ ಚೀನಾದ ಪಾಸ್‍ಪೊರ್ಟ್‍ಗಳನ್ನು ಹೊಂದಿದ್ದರು ಎಂದು ತಿಳಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ನೇಪಾಳದ ಹಿಚ್ಹೈಕಿಂಗ್ ಮೂಲಕ ಭಾರತ ಪ್ರವೇಶಿಸಿದ್ದಾಗಿ ಹೇಳಿದ್ದಾರೆ. ನೋಯ್ಡಾಗೆ ಹೋಗಿ ಅಲ್ಲಿ ಅವರು ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಮೊಬೈಲ್ ಫೋನ್ ದಾಖಲೆಗಳು ಮತ್ತು ಇತರ ವಸ್ತುಗಳನ್ನು ಪರಿಶೀಲನೆ ನಡೆಸಿದಾಗ ಹಣಕಾಸು ವಂಚನೆಯಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು,  ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು