Categories: ಬಿಹಾರ

ರೈಲು ಅಪಘಾತ: ಮೃತದೇಹ ತರಲು 45 ಸಾವಿರ ರೂ. ಕೇಳಿದ ಆಂಬ್ಯುಲೆನ್ಸ್ ಸಿಬ್ಬಂದಿ

ಪಾಟ್ನಾ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಪಟ್ಟಣದ ಸ್ಥಳೀಯರೊಬ್ಬರು ಸಾವನ್ನಪ್ಪಿದ್ದಾರೆ.

ಅಪಘಾತ ಸ್ಥಳದಿಂದ ರಾಜಾ ಪಟೇಲ್ ಅವರ ಮೃತದೇಹವನ್ನು ಮನೆಗೆ ತರಲು ಆಂಬ್ಯುಲೆನ್ಸ್ ನವರು 45,000 ರೂ.ಗೆ ಬೇಡಿಕೆಯಿದ್ದು, ಅವರ ಕುಟುಂಬ ಸದಸ್ಯರು ಈ ಮೊತ್ತವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದಾರೆ. ರಾಜಾ ಅವರು ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ತಮ್ಮ ಆರು ಸ್ನೇಹಿತರೊಂದಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಏರಿದ್ದರು.
“ರಾಜ ನಮ್ಮ ಕುಟುಂಬದ ಏಕೈಕ ಜೀವನಾಧಾರ. ಅವನು ತನ್ನ ಸ್ನೇಹಿತರೊಂದಿಗೆ ಕೋಲ್ಕತ್ತಾ ಮತ್ತು ಚೆನ್ನೈ ಮೂಲಕ ಕೇರಳಕ್ಕೆ ತಿರುವನಂತಪುರವನ್ನು ತಲುಪಲು ಮತ್ತು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಏರಿದ್ದರು. ಇದೀಗ ಕುಟುಂಬ ಸದಸ್ಯನ ಸಾವು ಕಣ್ಣಿರು ತರಿಸುವುದರೊಂದಿಗೆ ಮೃತದೇಹವನ್ನು ಹುಟ್ಟೂರಿಗೆ ತರಲು ಆಂಬ್ಯುಲೆನ್ಸ್ ನವರು 45,000 ರೂ. ಕೇಳುತ್ತಿದ್ದು, ದಿನನಿತ್ಯದ ಆಹಾರಕ್ಕಾಗಿ ನಾವು ಹೆಣಗಾಡುತ್ತಿರುವಾಗ ಆಂಬ್ಯುಲೆನ್ಸ್ ಗೆ ಹಣವನ್ನು ಹೇಗೆ ಹೊಂದಿಸುವುದು ಎಂದು ಪ್ರಶ್ನಿಸುತ್ತಿದ್ದಾರೆ. ಕೇರಳ ತಲುಪಿದ ಕೆಲಸ ಮಾಡಿ ರಾಜಾ ನಮಗೆ ಹಣ ಕಳುಹಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಈಗ ನಾನು ಏನು ಮಾಡಲಿ? ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡುತ್ತಿಲ್ಲ ಎಂದು ಮೃತ ರಾಜಾ ಪಟೇಲ್ ಅವರ ತಂದೆ ಭುವನ್ ಪಟೇಲ್ ಹೇಳಿದ್ದಾರೆ.

ರಾಜಾ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಎರಡು ತಿಂಗಳ ಮಗುವಿದೆ. ಅವನ ಹೆಂಡತಿ ಮತ್ತು ತಾಯಿ ಅಸಹಾಯಕರಾಗಿದ್ದಾರೆ. ರಾಜಾ ತನ್ನ ಗೆಳೆಯರೊಂದಿಗೆ ಸಂಜಯ್ ಪಾಸ್ವಾನ್, ವಿಜಯ್ ಪಾಸ್ವಾನ್, ವಿಶಾಲ್ ಪಾಸ್ವಾನ್, ಉಮೇಹ್ ಪಾಸ್ವಾನ್, ಸೂರಜ್ ರಾವುತ್ ಮತ್ತು ಗೌರಿ ಶಂಕರ್ ಗಿರಿ ಅವರು ಮೋತಿಹಾರಿಯಿಂದ ಕೋಲ್ಕತ್ತಾಗೆ ಮಿಥಿಲಾ ಎಕ್ಸ್‌ಪ್ರೆಸ್ ಅನ್ನು ಏರಿದ್ದರು.

ನಂತರ ಕೋಲ್ಕತ್ತಾದಲ್ಲಿ ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ ನಲ್ಲಿ ಪ್ರಯಾಣ ಬೆಳೆಸಿದ್ದರು. ರಾಜಾ ಅವರ ಇಬ್ಬರು ಸ್ನೇಹಿತರಾದ ವಿಜಯ್ ಮತ್ತು ಸಂಜಯ್ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.

“ಒಡಿಶಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನಾವು ಸ್ಥಳೀಯ ಮಟ್ಟದಲ್ಲಿ ನೆರವು ನೀಡುತ್ತಿದ್ದೇವೆ. ಸಾವಿನ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ. ಸಂತ್ರಸ್ತರ ಕುಟುಂಬ ಸದಸ್ಯರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಿಸಿದೆ ಎಂದು ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರವ್ ಜೋರ್ವಾಲ್ ಹೇಳಿದ್ದಾರೆ.

Sneha Gowda

Recent Posts

ನಟ ಶೇಖರ್ ಸುಮನ್, ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಈ ನಡುವೆ ಬಾಲಿವುಡ್ ನಟ ಶೇಖರ್​ ಸುಮನ್ ಹಾಗೂ ಕಾಂಗ್ರೆಸ್​ನ…

17 mins ago

ಊಟಿಗೆ ಪ್ರಯಾಣ ಬೆಳೆಸಲಿರುವ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಿಂದ ರಿಲ್ಯಾಕ್ಸ್ ಪಡೆಯಲು ಹೆಚ್‍ಎಎಲ್‍ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ ತೆರಳಲಿ ಮೂರು ದಿನಗಳ…

18 mins ago

ಕೇರಳದ ಐವರಲ್ಲಿ ʻವೆಸ್ಟ್‌ ಲೈನ್‌ ಜ್ವರʼ ಪತ್ತೆ

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ವೆಸ್ಟ್‌ ನೈಲ್‌ ಫೀವರ್‌ನ ಐದು ಪ್ರಕರಣಗಳು ಪತ್ತೆಯಾಗಿವೆ. ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಮನೆಗಳಲ್ಲೇ ಚಿಕಿತ್ಸೆ…

30 mins ago

ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿ ಸಂಭ್ರಮಿಸಿದ ವಿದ್ಯಾರ್ಥಿನಿ

ವಿದ್ಯಾರ್ಥಿನಿಯೊಬ್ಬರು ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಲೋಕಸಭಾ ಚುನಾವಣೆಗೆ ತನ್ನ ಹಕ್ಕು ಚಲಾಯಿಸಿದ್ದಾರೆ.

37 mins ago

ಮತದಾನದ ಫೋಟೊ ಹಂಚಿಕೊಂಡ ವಿನೋದ ಅಸೋಟಿ ಅಭಿಮಾನಿ

ಇಲ್ಲಿನ ತನ್ವೀರ್ ಟಿ.ಎಂ ಎಂಬ ಯುವಕ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ ಅವರಿಗೆ ಮತ ಹಾಕಿದ್ದನ್ನು…

49 mins ago

ರೇವಣ್ಣ ಕಿಡ್ನಾಪ್ ಮಾಡಿದ ಮಹಿಳೆ ತೋಟದ ಮನೆಯಲ್ಲಿ ಸಿಕ್ಕಿಲ್ಲ: ಸಾರಾ ಮಹೇಶ್

ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮಹಿಳೆ ತೋಟದ ಮನೆಯಲ್ಲಿ ಸಿಕ್ಕಿಲ್ಲ, ಎಂದು ಶಾಸಕ ಸಾರಾ ಮಹೇಶ್…

54 mins ago