News Karnataka Kannada
Monday, April 29 2024
ಬಿಹಾರ

ಬಿಹಾರದಲ್ಲಿ ಪಾದಚಾರಿಗಳ ಮೇಲೆ ಟ್ರಕ್ ಹರಿದು ನಾಲ್ವರು ಸಾವು

Uttar Pradesh: Three killed as truck rams into dhaba
Photo Credit : Pixabay

ಪಾಟ್ನಾ:  ಪಾದಚಾರಿಗಳ ಮೇಲೆ ಟ್ರಕ್ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ.

ಟ್ರಕ್ ಚಾಲಕ ಒಂದು ಸ್ಥಳದಲ್ಲಿ ಅಪಘಾತ ನಡೆಸಿ ಅಲ್ಲಿಂದ ಪರಾರಿ ಆಗಲು ಯತ್ನಿಸುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ನಾಲ್ಕು ಜನ ಪಾದಾಚಾರಿಗಳ ಮೇಲೆ ಟ್ರಕ್ ಹರಿದಿದೆ. ನಂತರ, ಸ್ಥಳೀಯ ನಿವಾಸಿಗಳು ಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಪೊಲೀಸರಿಗೆ ಹಸ್ತಾಂತರಿಸಿದರು.

ಮೃತರನ್ನು ಮೊಹಮ್ಮದ್ ಸರ್ಬುಲ್ ಆಲಂ, ಮೊಹಮ್ಮದ್ ಹಫೀಜ್ ಸಬ್ಬೀರ್, ಹಫೀಜ್ ರುವೈದ್ ಮತ್ತು ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ.

ಚಾಲಕನನ್ನು ಪ್ರಸ್ತುತ ಪೂರ್ಣಿಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಸಹ ಅದೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು