ಪಾಟ್ನಾ, ಏ.10: ಪಾಟ್ನಾದ ಜನನಿಬಿಡ ಸಬ್ಜಿ ಬಾಗ್ ಪ್ರದೇಶದ ಬಾಲಕರ ಹಾಸ್ಟೆಲ್ ನಲ್ಲಿ ಸ್ಫೋಟ ಸಂಭವಿಸಿದೆ.
ಪಿರ್ಬಹೋರ್ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಹಾಸ್ಟೆಲ್ ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಎಸ್ಎಚ್ಒ ಅಮಿತ್ ಕುಮಾರ್ ನೇತೃತ್ವದ ತಂಡ ತಕ್ಷಣ ಸ್ಥಳಕ್ಕೆ ತಲುಪಿ ಈ ಬಗ್ಗೆ ತನಿಖೆ ನಡೆಸಿದೆ. ಯಾರೋ ಹಾಸ್ಟೆಲ್ ಒಳಗೆ ಹೆಚ್ಚಿನ ತೀವ್ರತೆಯ ಪಟಾಕಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಅದು ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿದೆ. ನಾವು ಇಡೀ ಹಾಸ್ಟೆಲ್ ಅನ್ನು ಶೋಧಿಸಿದ್ದೇವೆ. ಬಾಂಬ್ ತಯಾರಿಸಲು ಬಳಸುವ ಯಾವುದೇ ವಸ್ತುಗಳು ಅಥವಾ ಸಾಧನಗಳು ಕಂಡುಬಂದಿಲ್ಲ” ಎಂದು ಎಸ್ಎಚ್ಒ ಹೇಳಿದರು. ಸಾರಾಮ್ ಮತ್ತು ಬಿಹಾರ ಶರೀಫ್ ನಲ್ಲಿ ಇತ್ತೀಚೆಗೆ ನಡೆದ ರಾಮನವಮಿ ಘರ್ಷಣೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.