News Karnataka Kannada
Tuesday, April 30 2024
ಬಿಹಾರ

ಜೇಡದಲ್ಲೂ ಮನುಷ್ಯನ ಮುಖ : ವಿಡಿಯೋ ಎಲ್ಲೆಡೆ ವೈರಲ್‌

ಮನುಷ್ಯನ ಮುಖವನ್ನು ಹೋಳುವ ಜೇಡವೊಂದು ಪತ್ತೆಯಾಗಿರುವ ಘಟನೆ ಬಿಹಾರದ ಜೆಹಾನಾಬಾದ್‌ನ ಮನೆಯೊಂದರಲ್ಲಿ ನಡೆದಿದೆ.
Photo Credit : NewsKarnataka

ಬಿಹಾರ: ಮನುಷ್ಯನ ಮುಖವನ್ನು ಹೋಳುವ ಜೇಡವೊಂದು ಪತ್ತೆಯಾಗಿರುವ ಘಟನೆ ಬಿಹಾರದ ಜೆಹಾನಾಬಾದ್‌ನ ಮನೆಯೊಂದರಲ್ಲಿ ನಡೆದಿದೆ.

ಈ ವಿಭಿನ್ನವಾದ ಜೇಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಮನೆಯೊಂದರ ಗೋಡೆಯ ಮೇಲೆ ಅಂಟಿಕೊಂಡಿದ್ದ ಈ ಜೇಡವನ್ನು ಸ್ಥಳೀಯರು ನೋಡಲು ಮುಗಿಬಿದ್ದಿದ್ದಾರೆ.

ಇನ್ಸ್ಟಾಗ್ರಾಮ್​​ ನಲ್ಲಿ ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋ ಹಾಕಿದ್ದು, ಒಂದೇ ವಾರದಲ್ಲಿ 38 ಸಾವಿರಕ್ಕೂ ಹೆಚ್ಚಿನ ಜನರು ನೋಡಿದ್ದಾರೆ.

ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿ​ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ಒಬ್ಬರು “ನಿಜವಾದ ಸ್ಪೈಡರ್ ಮ್ಯಾನ್” ಎಂದು ಬರೆದರೆ ಮತ್ತೊಬ್ಬರು “ಇದು ನಿಜವಲ್ಲ, ಎಡಿಟ್​ ಮಾಡಿರುವ ವಿಡಿಯೋ” ಎಂದು ಕಾಮೆಂಟ್​ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು