News Karnataka Kannada
Friday, May 10 2024
ದೇಶ

ಜಿಯೋ-ಏರ್ಟೆಲ್ ಬಳಕೆದಾರರಿಗೆ ಶಾಕ್: 5G ಇಂಟರ್ನೆಟ್ ಅಂತ್ಯ?

5G ಇಂಟರ್ನೆಟ್ ಬಳಸುವ ಕೋಟ್ಯಂತರ ಭಾರತೀಯ ಗ್ರಾಹಕರು ಸದ್ಯದಲ್ಲೇ ದೊಡ್ಡ ಆಘಾತವನ್ನು ಎದುರಿಸಬೇಕಾಗುತ್ತದೆ. ಹೌದು. . ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಆಗಲಿದೆ.
Photo Credit : News Kannada

ದೆಹಲಿ: 5G ಇಂಟರ್ನೆಟ್ ಬಳಸುವ ಕೋಟ್ಯಂತರ ಭಾರತೀಯ ಗ್ರಾಹಕರು ಸದ್ಯದಲ್ಲೇ ದೊಡ್ಡ ಆಘಾತವನ್ನು ಎದುರಿಸಬೇಕಾಗುತ್ತದೆ. ಹೌದು. . ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಆಗಲಿದೆ.

ನೀವು 5G ಅನ್ನು ಉಚಿತವಾಗಿ ಬಳಸುತ್ತಿದ್ದರೆ ಈ ಆಫರ್ ಸದ್ಯದಲ್ಲೇ ಕೊನೆಗೊಳ್ಳಲಿದೆ. ಆದಷ್ಟು ಬೇಗ ಜನರು 5G ಬಳಸಲು ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.

2024 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ಬಳಕೆದಾರರ ಸಂಖ್ಯೆ 20 ಕೋಟಿ ದಾಟುವ ನಿರೀಕ್ಷೆಯಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ 5G ಯೋಜನೆಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಿಗಿಂತ 5-10 ಪ್ರತಿಶತದಷ್ಟು ದುಬಾರಿಯಾಗಬಹುದು. ಇದಲ್ಲದೆ, ಎರಡೂ ಕಂಪನಿಗಳು 30-40 ಪ್ರತಿಶತ ಹೆಚ್ಚಿನ ಡೇಟಾವನ್ನು ನೀಡಬಹುದು, ಇದರಿಂದ ಜನರು 5G ಸೇವೆಯನ್ನು ಅಳವಡಿಸಿಕೊಳ್ಳಬಹುದು ಮತ್ತು ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಬಹುದು ಎಂದು ಹೇಳಲಾಗ್ತಿದೆ.

ಭಾರತದಲ್ಲಿ 5G ಕ್ರಾಂತಿಯನ್ನು ತಂದ ಕೀರ್ತಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಸಲ್ಲುತ್ತದೆ. ಎರಡೂ ಕಂಪನಿಗಳು ದೇಶದಲ್ಲಿ 5G ಸೇವೆಯನ್ನು ಒದಗಿಸುವಲ್ಲಿ ಮುಂದಾಳತ್ವ ವಹಿಸಿವೆ. ದೇಶಾದ್ಯಂತ ಸುಮಾರು 12.5 ಕೋಟಿ 5ಜಿ ಬಳಕೆದಾರರಿದ್ದಾರೆ.

ಇನ್ನು ಹೊಸ 5ಜಿ ರೀಚಾರ್ಜ್ ಯೋಜನೆಗಳು ಪ್ರಸ್ತುತ 4G ರೀಚಾರ್ಜ್ ದರಗಳಿಗಿಂತ ಕನಿಷ್ಠ 5-10% ದುಬಾರಿಯಾಗಬಹುದು. ಹಾಗೆ ಮಾಡುವುದರಿಂದ ಟೆಲಿಕಾಂ ಕಂಪನಿಗಳು ಹಣಗಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು