News Karnataka Kannada
Monday, April 29 2024
ಅಸ್ಸಾಂ

ಅಸ್ಸಾಂ: ಆಫ್ರಿಕನ್ ಹಂದಿ ಜ್ವರ ಪತ್ತೆ!

Kerala: Swine flu: Swine flu outbreak begins
Photo Credit : Freepik

ಅಸ್ಸಾಂ: ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರದ ಕಾಣಿಸಿಕೊಂಡಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇದು ಹಂದಿಗಳಿಗೆ ಮಾತ್ರ ಬರುವ ಸಾಂಕ್ರಾಮಿಕ ರೋಗ. ಅಸ್ಸಾಂನ ದಿಬ್ರುಗಢ ಜಿಲ್ಲೆಯ ಭೋಗಾಲಿ ಪಥರ್ ಗ್ರಾಮದ ಹಂದಿಗಳಿಗೆ ಈ ವೈರಸ್ ಸೋಂಕು ತಗುಲಿದೆ. ತಕ್ಷಣ ಸ್ಪಂದಿಸಿದ ಪ್ರಾಣಿ ಸಂರಕ್ಷಣಾ ಅಧಿಕಾರಿಗಳು ರೋಗ ಇತರ ಪ್ರದೇಶಗಳಿಗೆ ಹರಡದಂತೆ ಕ್ರಮಕೈಗೊಂಡಿದ್ದಾರೆ.

ಸೋಂಕಿತ ಹಂದಿಗಳು ಕಂಡುಬಂದ ಪ್ರದೇಶದ ಸುತ್ತ ಒಂದು ಕಿಲೋಮೀಟರ್ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅದೇ ಸ್ಥಳದಲ್ಲಿ ಸೋಂಕು ತಗುಲಿದ ಹಂದಿಗಳನ್ನು ಕೊಂದು ನೆಲದಲ್ಲಿ ಹೂಳಿದ್ದಾರೆ. ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸೋಂಕಿತ ಹಂದಿಗಳಿಂದ ಇತರ ಹಂದಿಗಳಿಗೆ ರೋಗ ಹರಡುವುದನ್ನು ತಡೆಯಲು ಇಂತಹ ಕ್ರಮ  ಕೈಗೊಂಡಿದ್ದಾರೆ. ಈ ರೋಗದಿಂದ ಮನುಷ್ಯರಿಗೆ ಯಾವುದೇ ರೀತಿಯ ಭಯವಿಲ್ಲ ಆದರೆ, ಹಂದಿಯಿಂದ ಹಂದಿಗೆ ತ್ವರಿತವಾಗಿ ಹರಡಬಹುದು. ಸ್ವಲ್ಪ ಸಮಯದವರೆಗೆ ಜನರು ಹಂದಿಮಾಂಸ ತನ್ನದಂತೆ ಸಲಹೆ ನೀಡಿದರು.

ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಉತ್ತರಾಖಂಡ, ಬಿಹಾರ ಮತ್ತು ತ್ರಿಪುರಾದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ವರದಿಯಾಗಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು