News Karnataka Kannada
Thursday, May 16 2024
ಅಸ್ಸಾಂ

ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಕಾರು-ಟ್ರಕ್ ಡಿಕ್ಕಿ 5 ಸಾವು

Woman killed in accident, son Ashwin and husband critically injured
Photo Credit :

ಅಸ್ಸಾಂ: ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಟ್ಟು ಐವರು ಸಾವನ್ನಪ್ಪಿದ್ದಾರೆ.ಭಾನುವಾರ ರಾಷ್ಟ್ರೀಯ ಹೆದ್ದಾರಿ-15ರಲ್ಲಿ ಎದುರಿನಿಂದ ಬಂದ ಟ್ರಕ್ ಕಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಮೃತರನ್ನು ಫರಿದುಲ್ ಇಸ್ಲಾಂ, ಆಜಾದ್ ಅಲಿ, ಇಬ್ರಾಹಿಂ ಅಲಿ, ಸಾನಿಯಾ ಅಖ್ತರ್ ಮತ್ತು ಮೊನೊವಾರಾ ಬೇಗಂ ಎಂದು ಗುರುತಿಸಲಾಗಿದೆ.
ಮೃತ ಐವರು ಯೂಟ್ಯೂಬರ್ ಆಗಿದ್ದು, ಚಿತ್ರೀಕರಣ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

ಸಾನಿಯಾ ಮತ್ತು ಆಕೆಯ ತಾಯಿ ಮೊನೊವಾರಾ ಡೇಪಮ್‌ನಿಂದ ಬಂದಿದ್ದರೆ, ಮೂವರು ಶ್ಯಾಮ್‌ಪುರದಿಂದ ಬಂದವರು.
ಮೂವರು ಫರಿದುಲ್ ಇಸ್ಲಾಂ, ಆಜಾದ್ ಅಲಿ, ಇಬ್ರಾಹಿಂ ಅಲಿ ಅವರು ಎಸ್‌ಆರ್ ಅಫೀಶಿಯಲ್ ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದರು, ಅದಕ್ಕಾಗಿ ಅವರು ಚಿತ್ರೀಕರಣಕ್ಕೆ ತೆರಳಿದ್ದರು.ಇದೇ ವೇಳೆ ವಿಡಿಯೋ ಚಿತ್ರೀಕರಣಕ್ಕೆ ಸಾನಿಯಾ ಅವರನ್ನು ನೇಮಿಸಿಕೊಂಡಿದ್ದರು.ಸಾನಿಯಾ ಕೂಡ ‘SH ಪ್ರಾಡಕ್ಟ್’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದರು.

ಮೃತರು ಆರು ತಿಂಗಳ ಹಿಂದೆ ತಮ್ಮ ಚಾನೆಲ್ ಆರಂಭಿಸಿದ್ದರು.ಅಪಘಾತದಲ್ಲಿ ಗಾಯಗೊಂಡ ಇತರರನ್ನು ಮಂಗಳದೈ ಸಿವಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ಸ್ಥಳಾಂತರಿಸಲಾಯಿತು.
ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು