ನವದೆಹಲಿ: ಎರಡು ದಿನಗಳ ಹಿಂದೆ ಇನ್ಫೋಸಿಸ್ ಸಹ ಸಂಸ್ಥಾಪಕ ದೇಶದ ಪ್ರಗತಿಯ ದೃಷ್ಟಿಯಿಂದ ಯುವಕರು 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಅವರ ಹೇಳಿಕೆಯನ್ನು ದೇಶದ ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಅವರು ಬೆಂಬಲಿಸಿದ್ದಾರೆ.
ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಇಂದಿನ ದಿನ ಕಾಲಘಟ್ಟದಲ್ಲಿ ವಾರದಲ್ಲಿ ಐದು ದಿನ ದುಡಿಯುವ ಯುವಕರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದಿನದ 14-16 ಕೆಲಸ ಮಾಡುತ್ತಾರೆ. ಇನ್ನು ನನ್ನ ತಂದೆ ವಾರದ ಏಳು ದಿನವು 12-14 ದಿನ ದುಡಿಯುತ್ತಾರೆ, ನಾನು ದಿನದ 10-12 ಗಂಟೆಗಳ ದಿನ ಕಾಲ ಕೆಲಸ ಮಾಡುತ್ತೇನೆ ಎಂದು ಸಜ್ಜನ್ ಜಿಂದಾಲ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
Our circumstances are unique and the challenges we face are distinct from the developed nations. They are working 4 or 5 days a week because their earlier generations clocked longer & more productive hours.
We can't let shorter work weeks elsewhere become our standard!— Sajjan Jindal (@sajjanjindal) October 27, 2023