News Karnataka Kannada
Tuesday, April 30 2024
ಆಂಧ್ರಪ್ರದೇಶ

ನದಿಗೆ ಹಾರಿದ ಮಹಿಳೆಗಾಗಿ ಆಕೆಯ ಸಾಕು ನಾಯಿ ಮಾಡಿದ್ದೇನು?

What did her pet dog do for the woman who jumped into the river?
Photo Credit : IANS

ಅಮರಾವತಿ: ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಗೋದಾವರಿ ನದಿಗೆ ಮಹಿಳೆಯೊಬ್ಬರು ಹಾರಿದ್ದು, ಆಕೆಯ ಸಾಕುನಾಯಿ ರಾತ್ರಿಯಿಡಿ ಕಾಯುತ್ತಾ ಕುಳಿತಿದ್ದ ದೃಶ್ಯ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹಿಳೆ ನದಿಗೆ ಹಾರುವ ವೇಳೆ ಆಕೆ ಚಪ್ಪಲಿಗಳನ್ನು ದಡದಲ್ಲಿರಿಸಿ ಹಾರಿದ್ದು, ಅದನ್ನೇ ಕಾಯುತ್ತಾ ನಾಯಿ ಕುಳಿತಿದೆ.

22 ವರ್ಷದ ಯುವತಿ ಭಾನುವಾರ ಸಂಜೆ ಯಾನಂ ಮತ್ತು ಯದುರ್ಲಂಕಾ ನಡುವಿನ ಜಿಎಂಸಿ ಬಾಲಯೋಗಿ ಸೇತುವೆಯಿಂದ ನದಿಗೆ ಹಾರಿದ್ದಾರೆ. ಈ ಪ್ರದೇಶದಲ್ಲಿ ಸೂರ್ಯಾಸ್ತವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದ ವೇಳೆಯೇ ಘಟನೆ ಸಂಭವಿಸಿದೆ. ಸೇತುವೆ ಮೇಲೆ ಮುದ್ದಿನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಇದ್ದಕ್ಕಿದ್ದಂತೆ ನದಿಗೆ ಹಾರಿದ್ದಾಳೆ. ದಾರಿಹೋಕರು ಬೊಬ್ಬೆ ಹಾಕಿದ ಬಳಿಕ ಮೀನುಗಾರರು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರವಾಹ ಹೆಚ್ಚಿದ್ದ ಕಾರಣ ರಕ್ಷಣೆ ಸಾಧ್ಯವಾಗಿಲ್ಲ.

ಆದರೆ ತನ್ನ ಮಾಲೀಕರು ವಾಪಸ್‌ ಬರಬಹುದೆಂದು ರಾತ್ರಿಯಿಡಿ ನಾಯಿ ಕಾಯುತ್ತಾ ಕುಳಿತಿತ್ತು. ಸೋಮವಾರ ಬೆಳಗ್ಗೆ ಮೃತ ಯುವತಿಯ ತಾಯಿ ಅದನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು