ಆಂಧ್ರಪ್ರದೇಶ: ಸತ್ತ ಹಾವನ್ನು ಹುಡುಕಿ ತಿನ್ನುವ ವಿಚಿತ್ರ ವ್ಯಕ್ತಿ

ಅನಂತಪುರಂ : ಹಾವುಗಳು ಎಂದ ಕೂಡಲೇ ಎಲ್ಲರೂ ಭಯಭೀತರಾಗುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿಯೇ ಆಹಾರವೇ ಹಾವು ಎಂದರೆ ನೀವು ನಂಬಲೇಬೇಕು. ಆತ ಹಾವನ್ನು ಸುಲಭವಾಗಿ ತಿನ್ನುತ್ತಾನೆ.

ಆಂಧ್ರಪ್ರದೇಶದಲ್ಲಿನ ವ್ಯಕ್ತಿಯೇ ಈ ರೀತಿಯಾಗಿ ಹಸಿಯಾಗಿ ತಿನ್ನುತ್ತಾನೆ. ಅನಂತಪುರಂ ಜಿಲ್ಲೆಯ ಪುತ್ತೂರು ವಲಯದ ಶಣಗಳಗೂಡೂರು ಗ್ರಾಮದಲ್ಲಿನ ಪುಳ್ಳಣ್ಣ ಎಂಬ 60 ವರ್ಷದ ಹಾವು ತಿನ್ನುವ ವ್ಯಕ್ತಿ. ಹೀಗಾಗಿ ಸತ್ತ ಹಾವನ್ನು ಈ ವ್ಯಕ್ತಿ ಹುಡುಕುತ್ತಿರುತ್ತಾನೆ.

ಆರಂಭದಲ್ಲಿ ಜನರು ಈತ ಹಾವುಗಳ ಪ್ರಿಯ ಎಂದೇ ಭಾವಿಸಿದ್ದರು. ಈ ವ್ಯಕ್ತಿ ಸತ್ತ ಹಾವು ಕಂಡರೆ ಅದಕ್ಕೆ ಹುಳಿ ಹಾಕಿ ತಿನ್ನುತ್ತಿದ್ದ. ಈ ರೀತಿ ಹಲವಾರು ವರ್ಷಗಳಿಂದ ಆತ ಹಾವುಗಳನ್ನು ತಿನ್ನುತ್ತಿದ್ದ. ಇತ್ತೀಚೆಗಷ್ಟೇ ಗ್ರಾಮದ ಜನರಿಗೆ ಈ ವಿಷಯ ತಿಳಿದು ಬಂದಿದೆ.

ಎರಡು ದಿನಗಳ ಹಿಂದೆ ಆ ಗ್ರಾಮದಲ್ಲಿ ಸತ್ತ ಹಾವಿನ ವಿಡಿಯೋ ತೆಗೆದಿದ್ದ ಕೆಲವು ಯುವಕರು ಸತ್ತ ಹಾವನ್ನು ಜಗಿದು ತಿನ್ನುತ್ತಿರುವ ಪುಳ್ಳಣ್ಣನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಜನರು ಇದನ್ನು ಕಂಡು ಶಾಕ್ ಆಗಿದ್ದಾರೆ.

ಸದ್ಯ ಈತನ ವರ್ತನೆಗೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆತನಿಗೆ ಇದುವರೆಗೂ ಏನೂ ಆಗಿಲ್ಲ. ಹಾವು ಸತ್ತು ಬಿದ್ದರೆ ಆತ ಹುಡುಕಿಕೊಂಡು ತಿನ್ನುತ್ತಾನೆ.

Gayathri SG

Recent Posts

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

11 mins ago

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 99 ಬ್ಯಾಚ್ ನ 25ನೇ ವರ್ಷಾಚರಣೆ

ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ…

21 mins ago

ಹಿಂದೂಗಳ ಪವಿತ್ರ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭ

ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…

36 mins ago

ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು 3 ದಿನ ಯಾರು ಭೇಟಿ ಮಾಡುವಂತಿಲ್ಲ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…

58 mins ago

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

1 hour ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

2 hours ago