ನವದೆಹಲಿ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾದ ಬಳಿಕ ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯೂ ಇಳಿಕೆಯಾಗಿದೆ.
ಎಲ್ಪಿಜಿ ಗ್ರಾಹಕರಿಗೆ ಪ್ರಮುಖ ಪರಿಹಾರವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 19 ಕೆ.ಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 158ರೂ.ನಷ್ಟು ಕಡಿತಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.
ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿದ್ದ, ದೆಹಲಿಯ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟದ ಬೆಲೆ 1,522ರೂ. ಆಗಿರುತ್ತದೆ. ಈ ಹಿಂದೆ, ರಕ್ಷಾ ಬಂಧನದ ಮುನ್ನಾದಿನದಂದು, ದೇಶದ ಮಹಿಳೆಯರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರವು ದೇಶೀಯ ಎಲ್ಪಿಜಿ ಬೆಲೆಯನ್ನು 200ರೂ. ಕಡಿತಗೊಳಿಸಿತ್ತು.
ಸೆ.1 ರಿಂದ ಜಾರಿಗೆ ಬರುವಂತೆ ಎಲ್ಪಿಜಿ, ದ್ರವೀಕೃತ ಪ್ರೊಪೇನ್ ಮತ್ತು ದ್ರವೀಕೃತ ಬ್ಯೂಟೇನ್ ಆಮದನ್ನು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ (ಎಐಡಿಸಿ) ನಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.