News Karnataka Kannada
Tuesday, April 30 2024
ದೇಶ

ಇಂದು ಕಕ್ಷೆ ಬದಲಿಸಿದ ಆದಿತ್ಯ ಎಲ್​1 ಮಿಷನ್: ಸೂರ್ಯನ ಕಡೆಗೆ ಮತ್ತೊಂದು ಹೆಜ್ಜೆ

Aditya L1 mission changes orbit today: Another step towards sun
Photo Credit : News Kannada

ಭಾರತದ ಮೊದಲ ಸೂರ್ಯ ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1 ಬಾಹ್ಯಾಕಾಶ ನೌಕೆಯು ನಾಲ್ಕನೇ ಕಕ್ಷೆಯ ಬದಲಾವಣೆಯನ್ನು ಪೂರ್ಣಗೊಳಿಸಿದೆ. ಸೆಪ್ಟೆಂಬರ್ 15ರಂದು ಬೆಳಗಿನ ಜಾವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ.

ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1, ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಐದು ಲಗ್ರೇಂಜ್ ಪಾಯಿಂಟ್‌ಗಳಿವೆ. ಯಾವುದೇ ಗ್ರಹಣ ಅಥವಾ ಅಡೆತಡೆಗಳಿಲ್ಲದೆ ಸೂರ್ಯನನ್ನು ನೋಡಬಹುದಾದ ಸ್ಥಳವೇ ಲಗ್ರೇಂಜ್ ಪಾಯಿಂಟ್.

ಸೆಪ್ಟೆಂಬರ್ 5ರಂದು ಎರಡನೇ ಕಕ್ಷೆಯ ಬದಲಾವಣೆಯನ್ನು ಮಾಡಿತ್ತು, ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿದ ಬಳಿಕ ಅಧ್ಯಯನ ಉದ್ದೇಶಿಸಿರುವ ಲ್ಯಾಂಗ್ರೇಜ್ ಪಾಯಿಂಟ್​ನತ್ತ ಆದಿತ್ಯ ಎಲ್​1 ಮಿಷನ್ ಸಾಗಲಿದೆ. ಲ್ಯಾಂಗ್ರೇಜ್ ಪಾಯಿಂಟ್ ತಲುಪಲು 125 ದಿನಗಳು ಹಿಡಿಯುತ್ತದೆ.

ಇಸ್ರೋದ ಬಾಹ್ಯಾಕಾಶ ನೌಕೆ 16 ದಿನಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಈ ಕುಶಲತೆಯ ಸಮಯದಲ್ಲಿ, ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಸಾಧಿಸಲಾಗುತ್ತದೆ. ಐದನೇ ಭೂಮಿಯ ಬೌಂಡ್ ಮ್ಯಾನ್ಯೂವರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆದಿತ್ಯ L-1 ತನ್ನ 110-ದಿನಗಳ ಪ್ರಯಾಣಕ್ಕಾಗಿ ಲಾಗ್ರೇಂಜ್ ಪಾಯಿಂಟ್‌ಗೆ ಹೊರಡಲಿದೆ.

ಬಾಹ್ಯಾಕಾಶ ನೌಕೆಯ ಮೂಲಕ ಸೂರ್ಯನ ಚಲನವಲನಗಳ ಮೇಲೆ ನಿಗಾ ಇಡಲು ಇದು ನೆರವಾಗಲಿದೆ ಎಂದು ಇಸ್ರೋ ಹೇಳಿದೆ.

https://twitter.com/isro/status/1702426982602907974/photo/1?ref_src=twsrc%5Etfw%7Ctwcamp%5Etweetembed%7Ctwterm%5E1702426982602907974%7Ctwgr%5E484dc1dbdce1508036b25b474a9d01a3868e8599%7Ctwcon%5Es1_&ref_url=https%3A%2F%2Ftv9kannada.com%2Fnational%2Fsolar-mission-aditya-l1-successfully-undergoes-4th-earth-bound-maneuvre-taking-one-more-step-towards-achieving-its-destination-nyr-670681.html

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು