ನವದೆಹಲಿ: ಲಸಿಕೆಯ ‘ಸುರಕ್ಷತಾ ವಲಯ’ದಿಂದ ನಾಗರಿಕರು ಯಾರು ಕೂಡ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಹಾಗೂ ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುವಂತೆ ಅವರು ದೇಶವಾಸಿಗಳಿಗೆ ತಮ್ಮ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ದಸರಾ ಹಬ್ಬ ಆರಂಭವಾಗುತ್ತದೆ, ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ದುಷ್ಠಶಕ್ತಿಗಳ ವಿರುದ್ಧ ಗೆದ್ದ ವಿಜಯದ ಸಂಕೇತವನ್ನು ಆಚರಿಸುತ್ತಿದ್ದು, ದುರ್ಗೆಯನ್ನು ಭಜಿಸುವ ಹೊತ್ತಿನಲ್ಲಿ ಕೋವಿಡ್ ಸೋಂಕಿನ ವಿರುದ್ಧ ಕೂಡ ಹೋರಾಡಬೇಕೆಂದು ನೆನಪು ಇಟ್ಟುಕೊಳ್ಳಬೇಕು ಎಂದರು.