News Karnataka Kannada
Saturday, May 11 2024
ದೇಶ

ಸಾಲ ತೀರಿಸಲು ಕಿಡ್ನಿ ಮಾರಾಟಕ್ಕಿಳಿದ ಗ್ರಾಮಸ್ಥರು ; ಮೂವರ ಬಂಧನ

Kidney Assam 13 7 21
Photo Credit :

ಗುವಾಹಟಿ, ಕೊರೋನ ಕಾರಣದಿಂದಾಗಿ ಬಡ ಮತ್ತು ಮದ್ಯಮ ವರ್ಗದವರು ತೀರಾ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ತಾವು ಮಾಡಿಕೊಂಡಿರುವ ಸಾಲ ತೀರಿಸಲು, ಆಸ್ಪತ್ರೆ ಖರ್ಚು ಭರಿಸಲು ಒಂದೇ ಗ್ರಾಮದಲ್ಲಿ ಹಲವು ಮಂದಿ ತಮ್ಮ ಕಿಡ್ನಿ ಮಾರಾಟ ಮಾಡಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬಡತನದ ಸಂಕಷ್ಟ ಎದುರಿಸಲು, ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲು, ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ದಕ್ಷಿಣ ಧರಂತುಲ್ ಗ್ರಾಮದ ಹಲವು ಮಂದಿ ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಕಿಡ್ನಿ ಮಾರಾಟ ಜಾಲದಲ್ಲಿದ್ದ ಓರ್ವ ಮಹಿಳೆ ಸೇರಿ ಒಟ್ಟು ಇಬ್ಬರನ್ನು ಬಂಧಿಸಲಾಗಿದೆ. ಮಹಿಳೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಎಸ್ ಪಿ ಅಪರ್ಣ ನಟರಾಜನ್ ಮಾಹಿತಿ ನೀಡಿದ್ದಾರೆ. ಗುವಾಹಟಿ ಮೂಲದ ಏಜೆಂಟ್ ಲಿಲಿಮಾಯ್ ಬೋಡೋ ಕಿಡ್ನಿ ಮಾರಾಟ ಮಾಡಲು ಸಿದ್ಧವಿರುವವರನ್ನು ಹುಡುಕಿ ಗ್ರಾಮಕ್ಕೆ ಬಂದಿದ್ದಾಗ ಆಕೆಯನ್ನು ಬಂಧಿಸಲಾಗಿದೆ. ಆಕೆ ಭರವಸೆ ನೀಡಿದ್ದರ ಪ್ರಕಾರ ಹಣವನ್ನು ಪಡೆಯದೇ ಅಸಮಾಧಾನಕ್ಕೆ ಒಳಗಾಗಿದ್ದ ಕುಟುಂಬವೊಂದು ಆಕೆಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದೆ. ಕಿಡ್ನಿಯೊಂದಕ್ಕೆ 4-5 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡುತ್ತಿದ್ದ ಆಕೆ ಕಮಿಷನ್ ಲೆಕ್ಕದಲ್ಲಿ 1.5 ಲಕ್ಷ ಪಡೆಯುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮದಲ್ಲಿರುವ ಬಹುತೇಕ ಮಂದಿ ರೈತರು ಹಾಗೂ ದಿನ ನಿತ್ಯದ ವೇತನ ಪಡೆಯುವ ಕಾರ್ಮಿಕರಾಗಿದ್ದು, ಸಾಂಕ್ರಾಮಿಕದಿಂದ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿಡ್ನಿ ಮಾರಾಟ ಮಾಡಿರುವವರು ನೀಡಿರುವ ಮಾಹಿತಿಯ ಪ್ರಕಾರ ಅವರುಗಳನ್ನು ಕೋಲ್ಕತ್ತಾಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ವಿಚಾರಣೆ ವೇಳೆ ಅರ್ಧ ಡಜನ್‌ಗೂ ಹೆಚ್ಚಿನ ಗ್ರಾಮಸ್ಥರು ತಮ್ಮ ಕಿಡ್ನಿಯನ್ನು ಮಾರಾಟ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲವರು ಸಾಲ ಮರುಪಾವತಿ ಮಾಡಲು, ಇನ್ನೂ ಕೆಲವರು ತಮ್ಮ ಕುಟುಂಬ ಸದಸ್ಯರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಕಿಡ್ನಿ ಮಾರಾಟ ಮಾಡಿದ್ದಾರೆ. “ಕಿಡ್ನಿ ಮಾರಾಟ ಮಾಡಿದವರ ನಿಖರ ಮಾಹಿತಿ ಪೊಲೀಸರ ಬಳಿ ಇಲ್ಲ. ಗ್ರಾಮಸ್ಥರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವುದೇ ಅಂಗ ಕಸಿ ಮಾಡುವುದಕ್ಕೂ ಅನುಮೋದನೆ ನೀಡಲು ಅಧಿಕಾರ ಹೊಂದಿರುವ ರಾಜ್ಯ ಅಂಗಾಂಗ ಕಸಿಗಾಗಿ ಇರುವ ಅಧಿಕೃತ ಸಮಿತಿಯೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ, ತನಿಖೆ ಪ್ರಗತಿಯಲ್ಲಿದೆ” ಎಂದು ಎಸ್ ಪಿ ತಿಳಿಸಿದ್ದಾರೆ. ಕಿಡ್ನಿ ಮಾರಾಟ ಜಾಲದ ಏಜೆಂಟ್ ಸೇರಿದಂತೆ ಮೂವರನ್ನು ಗ್ರಾಮದ ಕೆಲವು ಮಂದಿ ಪೊಲೀಸರ ವಶಕ್ಕೆ ಒಪ್ಪಿಸುವ ಮೂಲಕ ಈ ಅಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ವರೆಗೂ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗ್ರಾಮದ 30 ಮಂದಿ ಕಿಡ್ನಿ ಮಾರಾಟ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು