ನವದೆಹಲಿ :ಅನಕ್ಷರಸ್ತ ಮಹಿಳೆಯರಿಗೆ ಹೋಲಿಸಿದರೆ, ಕಾಲೇಜು ಡಿಗ್ರೀ ಹೊಂದಿರುವ ಭಾರತೀಯ ಮಹಿಳೆಯರಲ್ಲಿ ಸಿಸೇರಿಯನ್ ಪ್ರಮಾಣ ನಾಲ್ಕು ಪಟ್ಟು ಹೆಚ್ಚು ಎಂದು ನೂತನ ಸಂಶೋಧನೆಯೊಂದು ಅಚ್ಚರಿಯ ಮಾಹಿತಿ ಹೊರಹಾಕಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಈ ಮಾಹಿತಿ ಹೊರಬಿದ್ದಿದೆ. ಈ ಸಮೀಕ್ಷೆಯಲ್ಲಿ ಭಾರತೀಯ ಸಂಶೋಧಕರಲ್ಲದೆ, ಹಾರ್ವರ್ಡ್ ಯೂನಿವರ್ಸಿಟಿ ಮತ್ತು ಕೊರಿಯಾ ಸಂಶೋಧಕರೂ ಪಾಲ್ಗೊಂಡಿದ್ದರು.
1.36 ಲಕ್ಷ ಮಂದಿಯನ್ನು ಸಮೀಕ್ಷೆಯ ಸಂದರ್ಭ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 36 ರಾಜ್ಯಗಳ, 640 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎನ್ನುವುದು ವಿಶೇಷ.