ಲಖನೌ : ರೈತರ ವಿರುದ್ಧ ದಾಖಲಾಗಿದ್ದ ಸುಮಾರು 900 ಕೇಸ್ ಗಳನ್ನು ಹಿಂತೆಗೆದುಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಪೈರನ್ನು ಸುಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾದ ಆರೋಪದ ಮೇರೆಗೆ ರೈತರ ಮೇಲೆ ಕೇಸ್ ಹಾಕಲಾಗಿತ್ತು.
ಈ ಸಂಬಂಧದ ರಾಜ್ಯ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ ನಂತರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ( ಗೃಹ) ಅವನಿಶ್ ಅವಾಸ್ತಿ ರೈತರ ಮೇಲಿನ ಕೇಸ್ ಹಿಂಪಡೆಯುವ ಆದೇಶವನ್ನು ಹೊರಡಿಸಿದ್ದಾರೆ.
ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ರೈತರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದ್ದರಿಂದ ಪೈರನ್ನು ಸುಟ್ಟಿದ್ದಕ್ಕಾಗಿ ರೈತರ ವಿರುದ್ಧ ಹಾಕಲಾಗಿದ್ದ 868 ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವಾಸ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ನಾಳೆ ಮೇ ಮೂರರಂದು ದಾವಣಗೆರೆಗೆ ಆಗಮಿಸುತ್ತಿದ್ದಾರೆ.
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ದವಾಗಬೇಕು.ಕಳೆದ 10…
ಪವಾಡ ಪುರುಷ ಮಲೆ ಮಹದೇಶ್ವರ ಕೋಟಿ ಒಡೆಯನಾಗಿ ಮುಂದುವರೆಯುತ್ತಿದ್ದು, ಇದೀಗ 34 ದಿನಗಳ ಅಂತರದಲ್ಲಿ ಮೂರು ಕೋಟಿ ನಾಲ್ಕು ಲಕ್ಷದ…
ಅಶ್ಲೀಲ ವೀಡಿಯೋ ಪ್ರಕರಣ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿದ್ದು, ಅವರಿಗೆ ಕ್ಲಿಯರೆನ್ಸ್ ಕೊಟ್ಟವರು ಯಾರು ಎಂಬುದರ…
ಉಡುಪಿ ಜಿಲ್ಲೆಯಾದ್ಯಂತ ಸಿ ಎನ್ ಜಿ ಬಂಕ್ ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ…
ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ…