News Karnataka Kannada
Monday, April 29 2024
ದೇಶ

ಯಾವೊಂದು ಮುಸ್ಲಿಂ ರಾಷ್ಟ್ರವೂ ಮಹಿಳೆಯರನ್ನು ಪುರುಷರ ಸಮನಾಗಿ ಕಾಣುತ್ತಿಲ್ಲ ; ತಸ್ಲಿಮಾ ನಸ್ರೀನ್‌

Taslema
Photo Credit :

ಬೆಂಗಳೂರು: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರ ಸಂಘಟನೆಯ ಆಡಳಿತ ಹೇರಿಕೆಯಾದ ಬಳಿಕ ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲಿಮಾ ನಸ್ರೀನ್‌, ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
‘ಐಸಿಸ್‌, ತಾಲಿಬಾನ್‌, ಅಲ್‌ ಖೈದಾ, ಬೊಕೊ ಹರಾಮ್‌ನಂತಹ ಸಂಘಟನೆಗಳು ಪ್ರತಿಪಾದಿಸುವ ಇಸ್ಲಾಂ ನಿಜವಾದ ಇಸ್ಲಾಂ ಅಲ್ಲವೆಂದು ನೀವು ಹೇಳುತ್ತೀರಿ. ಹಾಗಿದ್ದರೆ ನಿಜವಾದ ಇಸ್ಲಾಂ ಅನ್ನು ಯಾವ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ?’ ಎಂದು ಟ್ವೀಟ್‌ ಮೂಲಕ ಕೇಳಿದ್ದಾರೆ. ‘ಸತ್ಯ ಏನೆಂದರೆ, ಯಾವೊಂದು ಮುಸ್ಲಿಂ ರಾಷ್ಟ್ರವೂ ಮಹಿಳೆಯರನ್ನು ಪುರುಷರ ಸಮನಾಗಿ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘9/11ರ ಭಯೋತ್ಪಾದಕ ದಾಳಿ ಸಂದರ್ಭ ಅವಳಿ ಟವರ್‌ನಲ್ಲಿದ್ದ ಸುಮಾರು 200 ಮಂದಿ ಪ್ರಾಣ ಕಳೆದುಕೊಂಡರು. ತಾಲಿಬಾನ್‌ ಉಗ್ರಗಾಮಿಗಳ ಭಯದಿಂದ ರಾಷ್ಟ್ರವನ್ನು ತೊರೆದು ವಿಮಾನದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಇಬ್ಬರು ಆಫ್ಗನಿಯರು ಕೆಳಗೆ ಬಿದ್ದು ಸತ್ತಿದ್ದಾರೆ. ‘ಇಸ್ಲಾಮಿಕ್‌ ಭಯೋತ್ಪಾದನೆ’ಯನ್ನು ನಿಲ್ಲಿಸಿ. ಎಲ್ಲರಿಗೂ ಸ್ವತಂತ್ರವಾಗಿ, ಸುರಕ್ಷಿತವಾಗಿ ಜೀವಿಸುವ ಹಕ್ಕಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಸ್ಲಿಮಾ ನಸ್ರೀನ್‌ ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು