ಹರ್ಯಾಣ: ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಪ್ರಥಮ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ 26ರ ಹರೆಯದ ಅಭಿಲಾಶಾ ಬಾರಕ್.
ಹರ್ಯಾಣದ ಅಭಿಲಾಶಾ ಮಿಲಿಟರಿ ಪರಿಸರದಲ್ಲೇ ಬೆಳೆದವರು. ಇವರ ತಂದೆ 2011ರಲ್ಲಿ ಸೇನೆಯಿಂದ ನಿವೃತ್ತರಾದವರು. ಇವರ ಸಹೋದರ 2013ರಲ್ಲಿ ಮಿಲಿಟರಿ ಅಕಾಡಮಿಯಿಂದ ತೇರ್ಗಡೆ ಹೊಂದಿದ್ದಾರೆ.
2016ರಲ್ಲಿ ದೆಹಲಿ ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಮುಗಿಸಿರುವ ಅಭಿಲಾಶಾ, 2018ರಲ್ಲಿ ಸೇನಾ ತರಬೇತಿಗೆ ಸೇರಿಕೊಂಡರು.
ಆಕೆ ತರಬೇತಿ ಪೂರ್ತಿಗೊಳಿಸಿದ ಕಾಲಕ್ಕೆ ಮಹಿಳೆಯರನ್ನು ಸೆಣೆಸಾಟದ ಜವಾಬ್ದಾರಿಯ ಹುದ್ದೆಗಳಲ್ಲಿ ಸೇರಿಸಿಕೊಳ್ಳುವ ನಿರ್ಣಯವಿನ್ನೂ ಆಗಿರಲಿಲ್ಲ. ನಿಯಮ ಬದಲಾಗುತ್ತಲೇ ಅಭಿಲಾಶಾ ಅವರಿಗೀಗ ಯುದ್ಧ ಹೆಲಿಕಾಪ್ಟರಿನ ಮೊದಲ ಮಹಿಳಾ ಪೈಲಟ್ ಆಗುವ ಅವಕಾಶ ಸಿಕ್ಕಿದೆ.
ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರ್ನ ಪ್ರಥಮ ಮಹಿಳಾ ಪೈಲೆಟ್ ಆಗಿ ಕ್ಯಾಪ್ಟನ್ ಅಭಿಲಾಶಾ ಬಾರಕ್ ಅವರು ನೇಮಕಗೊಂಡಿದ್ದಾರೆ.
ದೇಶಸೇವೆ ಮಾಡುವ ನಿಮಗೆ ಅಭಿನಂದನೆಗಳು pic.twitter.com/qozOz2rRuC
— Pralhad Joshi (Modi Ka Parivar) (@JoshiPralhad) May 26, 2022