ಭಾರತೀಯ ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಹೊಸ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಫಾಸ್ಟೆಸ್ಟ್ ಸೋಲೊ ಸೈಕ್ಲಿಂಗ್ನಲ್ಲಿ ಅತಿ ವೇಗದಲ್ಲಿ ಸೋಲೋ ಸೈಕ್ಲಿಂಗ್ ಮಾಡಿ ನೂತನ ದಾಖಲೆ ಮಾಡಿದ್ದಾರೆ.
ಲೇಹ್ನಿಂದ ಮನಾಲಿಗೆ ಒಟ್ಟು 472 ಕಿ.ಮೀ. ಕ್ರಮಿಸಿದ್ದಾರೆ. ಕಳೆದ ಶನಿವಾರ ಬೆಳಗ್ಗೆ 4 ಗಂಟೆಗೆ ಲಡಾಕ್ನ ಲೇಹ್ನಿಂದ ಹೊರಟಿದ್ದು, ಭಾನುವಾರ ಮಧ್ಯಾಹ್ನ ಮನಾಲಿಯನ್ನು ತಲುಪಿದ್ದಾರೆ.
ಭಾರತೀಯ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ ಅವರು ಸೆ.26 ರಂದು ವೇಗದ ಸೊಲೊ ಸೈಕ್ಲಿಂಗ್ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಐದು ಮಾರ್ಗಗಳನ್ನು ದಾಟಿ 34 ಗಂಟೆ 54 ನಿಮಿಷಗಳಲ್ಲಿ ಮನಾಲಿಯನ್ನು ತಲುಪಿದ್ದಾರೆ ಎಂದು ಹೇಳಿದ್ದಾರೆ.