Categories: ದೇಶ

ಭಾರತದ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆದ ಅಫ್ಘಾನ್ ಸೈನಿಕರಿಗೆ 6 ತಿಂಗಳ ವೀಸಾ

ಭಾರತದ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಅಫ್ಘಾನ್ ಸೈನಿಕರು ಹಾಗೂ ಕೆಡೆಟ್ ಗಳನ್ನು ವಿದೇಶಕ್ಕೆ ಕಳುಹಿಸಲು ಭಾರತ ತೀರ್ಮಾನಿಸಿದೆ.

ಪ್ರಸ್ತುತ 180 ಅಫ್ಘಾನ್ ಸೈನಿಕರಲ್ಲಿ 140 ಮಂದಿಯನ್ನು ಇಂಗ್ಲೆಂಡ್, ಜರ್ಮನಿ ಹಾಗೂ ಕೆನಡಾ ರಾಷ್ಟ್ರಗಳಿಗೆ ಕಳುಹಿಸಲು ವೀಸಾ ಅರ್ಜಿ ಸಲ್ಲಿಸಲಾಗಿದೆ. ಭಾರತದ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲಾ ಅಫ್ಘಾನ್ ಕೆಡೆಟ್‌ಗಳು ಮತ್ತು ಸೈನಿಕರಿಗೆ ಆರು ತಿಂಗಳ ಕಾಲ ಇ-ವೀಸಾಗಳನ್ನು ನೀಡಲಾಗುವುದು. ಈ ಅವಧಿಯಲ್ಲಿ ಅವರ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಸರ್ಕಾರಿ ಮೂಲಗಳು ಉಲ್ಲೇಖಿಸಿವೆ ಎಂದು ಎಎನ್ಐ ವರದಿ ತಿಳಿಸಿದೆ.

ಒಟ್ಟು 180 ಕೆಡೆಟ್‌ಗಳು ಮತ್ತು ಸೈನಿಕರಿಗೆ ಭಾರತೀಯ ಮಿಲಿಟರಿ ಅಕಾಡೆಮಿ (IMA) ಡೆಹ್ರಾಡೂನ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಖಡಕ್ವಾಸ್ಲಾ ಮತ್ತು ಚೆನ್ನೈನಲ್ಲಿನ ಅಧಿಕಾರಿಗಳ ತರಬೇತಿ ಅಕಾಡೆಮಿ (OTA) ಯಲ್ಲಿ ತರಬೇತಿ ನೀಡಲಾಗುತ್ತಿದೆ.

ಈಗಾಗಲೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಫ್ಘಾನಿಸ್ತಾನದ ಬಗ್ಗೆ ಚರ್ಚಿಸಲಾಗಿದ್ದು, ಯಾವುದೇ ತಾಲಿಬಾನ್ ನಾಯಕರು ಹಾಗೂ ವಕ್ತಾರರನ್ನು ಸಭೆಗಳಿಗೆ ಆಹ್ವಾನಿಸುತ್ತಿಲ್ಲ.

Sneha Gowda

Recent Posts

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

19 mins ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

30 mins ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

41 mins ago

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

51 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

1 hour ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

1 hour ago