1 ರಿಂದ 7ನೇ ತರಗತಿ ವರೆಗಿನ(ಪ್ರಾಥಮಿಕ ವಿಭಾಗ) ಮತ್ತು 10 ಹಾಗೂ 12ನೇ ತರಗತಿಗಳು ನವೆಂಬರ್ 1 ರಂದು ಆರಂಭವಾಗಲಿದ್ದು, ಇತರ ತರಗತಿಗಳು ನವೆಂಬರ್ 15 ರಂದು ಆರಂಭವಾಗುತ್ತವೆ. ಪ್ರಾಥಮಿಕ ತರಗತಿಗಳನ್ನು ಮೊದಲು ಪುನರಾರಂಭಿಸಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ ಎಂದು ಕೇರಳ ಸಿಎಂ ಹೇಳಿದ್ದಾರೆ. 10 ಮತ್ತು 12 ನೇ ತರಗತಿಯ ಶಾಲೆಗಳನ್ನು ಮೊದಲು ಪುನರಾರಂಭಿಸಬೇಕಾಗಿದೆ. ಏಕೆಂದರೆ ಆ ವಿದ್ಯಾರ್ಥಿಗಳು ಮುಂದಿನ ವರ್ಷ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕು ಎಂದಿದ್ದಾರೆ.
ಶಾಲೆ ಪುನರಾರಂಭಕ್ಕೆ ಮಾಡಬೇಕಾದ ಸಿದ್ಧತೆಗಳನ್ನು ಜಂಟಿಯಾಗಿ ನಿರ್ಧರಿಸಲು ಸಾಮಾನ್ಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ಶಾಲಾ ಮಕ್ಕಳಿಗಾಗಿ ವಿಶೇಷ ಮಾಸ್ಕ್ ಗಳನ್ನು ಒದಗಿಸಬೇಕೆಂದು ಸಿಎಂ ಪಿಣರಾಯಿ ಸೂಚಿಸಿದ್ದಾರೆ. ಅಲ್ಲದೆ ಅಂತಹ ಮಾಸ್ಕ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸುವಂತೆ ಶಾಲೆಗಳಿಗೆ ನಿರ್ದೇಶಿಸಿದ್ದಾರೆ .