ಮಾರುಕಟ್ಟೆಯಲ್ಲಿ ಈ ಕಾರಿಗೆ ನಿರೀಕ್ಷಿತ ಬೇಡಿಕೆ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕಾರನ್ನು ಖರೀದಿಸಿರುವ ಗ್ರಾಹಕರಿಗಾಗಿ ಮುಂದಿನ 10 ವರ್ಷಗಳವರೆಗೆ ಅದರ ಬಿಡಿ ಭಾಗಗಳ ಮಾರಾಟವನ್ನು ಮುಂದುವರಿಸಲಾಗುವುದು ಎಂದು ಟೊಯೋಟ ತಿಳಿಸಿದೆ.
2018ರಲ್ಲಿ ಬಿಡುಗಡೆಗೊಂಡ ಯಾರಿಸ್ ಅನ್ನು 2019ರಲ್ಲಿ ಮತ್ತೂಮ್ಮೆ ಅಪ್ಡೇಟ್ ಮಾಡಲಾಗಿತ್ತು. ಟೊಯೊಟೊ ಮತ್ತು ಸುಜುಕಿ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದ ಅನುಸಾರ ಟೊಯೊಟೊದ ಯಾರಿಸ್ ಕಾರಿನ ಮಾಡೆಲ್ ಸುಜುಕಿ ಕೈ ಸೇರಲಿದ್ದು, ಶೀಘ್ರದಲ್ಲಿಯೇ ಬೆಲ್ಟಾ ಹೆಸರಿನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.