Categories: ದೇಶ

ಟಿಸಿಎಸ್ :   ಮತ್ತೆ ವೃತ್ತಿ ಶುರುಮಾಡುವ ಮಹಿಳೆಯರಿಗೆ ಅವಕಾಶ

ಟಿಸಿಎಸ್ :    ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಉದ್ಯೋಗ ಹುಡುಕುತ್ತಿರುವ ಪ್ರತಿಭಾವಂತ ಮಹಿಳೆಯರಿಗೆ ದೊಡ್ಡ ಆಫರ್ ನೀಡಿದೆ. ಐಟಿ ವೃತ್ತಿಯಲ್ಲಿ ಕನಿಷ್ಠ ಎರಡು ವರ್ಷವಾದರೂ ಅನುಭವ ಹೊಂದಿರು ಮಹಿಳೆಯರ ಅತಿ ದೊಡ್ಡ ನೇಮಕಾತಿಗೆ ಟಿಸಿಎಸ್ ಮುಂದಾಗಿದೆ.

‘ಪ್ರತಿಭಾವಂತ ಮತ್ತು ಸಾಮರ್ಥವುಳ್ಳ ಮಹಿಳೆಯರು ಯಾವಾಗಲೂ ಮತ್ತೊಬ್ಬರಿಗೆ ಸ್ಫೂರ್ತಿಯ ಚಿಲುಮೆಯಾಗಿರುತ್ತಾರೆ. ಅಂಥ ಪ್ರತಿಭಾವಂತ ಮಹಿಳೆಯರಿಗೆ ಇದು ಉತ್ತಮ ಅವಕಾಶ. ಈ ಆಫರ್ ಸದುಪಯೋಗ ಪಡೆದುಕೊಳ್ಳಿ ಮತ್ತು ಟಿಸಿಎಸ್‌ನೊಂದಿಗೆ ಪಾಲುದಾರಿಕೆದಾರರಾಗಿ’ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ.

ಈ ವರ್ಷ ಜೂನ್‌ನಲ್ಲಿ ಟಿಸಿಎಸ್ 20,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಇದು ಮೂರು ತಿಂಗಳ ಅವಧಿಯಲ್ಲಿನ ಅತಿ ಹೆಚ್ಚು ನೇಮಕಾತಿಗಳಲ್ಲಿ ಒಂದಾಗಿದೆ. ಈ ಮೂಲಕ ಒಟ್ಟು ಟಿಸಿಎಸ್ ನ ಉದ್ಯೋಗಿಗಳ ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಾಗಿದೆ.

ಟಿಸಿಎಸ್ ಪ್ರತಿ ವರ್ಷ 40,000 ಸಾವಿರಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳುತ್ತಿದ್ದು, ಈ ವಿತ್ತೀಯ ವರ್ಷದಲ್ಲೂ ಟಿಸಿಎಸ್ 40,000 ಹೊಸಬರನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ. ದೇಶದ ತಂತ್ರಜ್ಞಾನ ಉದ್ಯೋಗದಾತರ ಪಟ್ಟಿಯಲ್ಲಿ ಟಿಸಿಎಸ್ ಎರಡನೇ ಸ್ಥಾನದಲ್ಲಿದ್ದು, 5.37 ಲಕ್ಷ ಉದ್ಯೋಗಿಗಳೊಂದಿಗೆ ಅಕ್ಸೆಂಚರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

‘ಉದ್ಯೋಗಿಗಳು ಕೆಲಸವನ್ನು ಉಳಿಸಿಕೊಳ್ಳು ಹೆಣಗಾಡುತ್ತಿರುವ ಈ ಸಮಯದಲ್ಲಿ, ಹೊಸಬರನ್ನು ನೇಮಕಾತಿ ಮಾಡಿಕೊಳ್ಳುವ ಬದಲು, ಅನುಭವಿಗಳನ್ನು ನೇಮಿಸಿಕೊಂಡು ತರಬೇತಿ ನೀಡಿ, ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದರೆ ಕಂಪನಿಗೆ ಲಾಭವಿದೆ’ ಎಂದು ಸಿಒಒ ಎನ್. ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.

Sneha Gowda

Recent Posts

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

9 mins ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

33 mins ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

53 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

1 hour ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

1 hour ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

2 hours ago