News Karnataka Kannada
Friday, May 03 2024
ವಿದೇಶ

ಜೈಪುರದಲ್ಲಿ ಉದ್ಘಾಟನೆಗೆ ಸಿದ್ದವಾಗಿದೆ ವಿಶ್ವದ ಮೂರನೇ ಅತೀ ದೊಡ್ಡ ಸ್ಟೇಡಿಯಂ

Jaipur Stadium 3 7 21
Photo Credit :

ಜೈಪುರ : ಜೈಪುರದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಜೈಪುರ ಅಭಿವೃದ್ದಿ ಪ್ರಾಧಿಕಾರ ಸ್ಟೇಡಿಯಂಗೆ ಅಗತ್ಯವಾದ ಭೂಮಿಯನ್ನು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್​ಗೆ ನೀಡಿದೆ.ಜೈಪುರ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್​ ಗೌರವ್ ಗೋಯಲ್ ಆರ್​ಸಿಎ ಅಧ್ಯಕ್ಷ ವೈಭವ್ ಗೆಹ್ಲೋಟ್​ಗೆ ಜಾಗದ ಕಾಗದ ಪತ್ರಗಳನ್ನು ನೀಡಿದ್ದಾರೆ. ದೆಹಲಿ ರಸ್ತೆಯಲ್ಲಿರುವ ಚಾಂಪ್ ಹಳ್ಳಿಯಲ್ಲಿ ವಿಶ್ವದ 3ನೇ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ.ಈ ಸ್ಟೇಡಿಯಂ 75,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಇದು ಎರಡು ಹಂತದಲ್ಲಿ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ 45,000 ಜನರ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗುವುದು ಮತ್ತು 2ನೇ ಹಂತದಲ್ಲಿ ಅದನ್ನು 30,000 ಜನರಿಗೆ ಸ್ಟೇಡಿಯಂ ಸಾಮರ್ಥ್ಯ ವಿಸ್ತರಿಸಲಾಗುವುದು ಎಂದು ವೈಭವ್ ಗೆಹ್ಲೋಟ್ ತಿಳಿಸಿದ್ದಾರೆ.ಈ ಸ್ಟೇಡಿಯಂ 2.5 ವರ್ಷಗಳಿಂದ 3 ವರ್ಷಗಳವರೆಗೆ ಸುಮಾರು 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಸುಮಾರು 650 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಮೊದಲ ಹಂತದಲ್ಲಿ 400 ಕೋಟಿ ರೂ. ಹೂಡಲಾಗುವುದು. ಇದಕ್ಕೆ ಬಿಸಿಸಿಐ 100 ಕೋಟಿ ರೂ. ಬಿಡುಗಡೆ ಮಾಡಿದೆ. ₹100 ಕೋಟಿ ಲೋನ್ ಪಡೆಯಲಾಗುತ್ತದೆ ಮತ್ತು ಕಾರ್ಪೊರೇಟ್ ಕಂಪನಿಗಳ ಮೂಲಕ ಆರ್​ಸಿಎ 90 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು ಎಂದು ಗೆಹ್ಲೋಟ್ ತಿಳಿಸಿದ್ದಾರೆ.ಈ ಹೊಸ ಸ್ಟೇಡಿಯಂನಲ್ಲಿ ಎರಡು ಅಭ್ಯಾಸದ ಮೈದಾನ, ಅಕಾಡೆಮಿ, ಕ್ಲಬ್ ಹೌಸ್​ ಹೋಟೆಲ್ ಮತ್ತು ಎಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ಲಭ್ಯವಿರುವ ಎಲ್ಲಾ ಇತರ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ ಎಂದು ತಿಳಿಸಿದ್ದಾರೆ.ಅಹ್ಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ದಾಖಲೆ ಹೊಂದಿದ್ದರೆ, ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂ 2ನೇ ಅತಿದೊಡ್ಡ ಕ್ರೀಡಾಂಗಣವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು