ಪ್ರಧಾನಿ ನರೇಂದ್ರ ಮೋದಿ ಜಿ20 ಶೃಂಗಸಭೆಗಾಗಿ ಇಂದು ರೋಮ್ಗೆ ಪ್ರಯಾಣ ಬೆಳೆಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ರೋಮ್ ತಲುಪಲಿದ್ದಾರೆ. ಇನ್ನೊಂದು ವಿಶೇಷವೇನೆಂದರೆ ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ರೋಮ್ಗೆ ಭೇಟಿ ನೀಡುತ್ತಿರುವುದಾಗಿದೆ. ಈ ಹೆಮ್ಮೆಯ ಗರಿ ನರೇಂದ್ರ ಮೋದಿಯವರಿಗೆ ಸೇರಲಿದೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಧಾನಿ ರೋಮ್ ತಲುಪಲಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಅಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಲಿದ್ದಾರೆ. ನಂತರ ಸಂಜೆ 5.30ಕ್ಕೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ
ಎರಡು ದಿನಗಳ ಪ್ರವಾಸ ಇದಾಗಿದ್ದು, ಅಕ್ಟೋಬರ್ 31ರವರೆಗೂ ಪ್ರಧಾನಿ ಅಲ್ಲಿಯೇ ಇರಲಿದ್ದಾರೆ. ಜಿ 20 ಶೃಂಗಸಭೆಯು ಇಟಲಿಯ ರೋಮ್ನಲ್ಲಿ ಅಕ್ಟೋಬರ್ 30 ಮತ್ತು 31 ರಂದು ನಡೆಯಲಿದೆ. ಹವಾಮಾನ ಬದಲಾವಣೆ, ಅಫ್ಘಾನಿಸ್ತಾನ ಮತ್ತು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.
PM @narendramodi emplanes for Rome, where he will attend the @g20org Summit. pic.twitter.com/crYzkmUDWu
— PMO India (@PMOIndia) October 28, 2021