ದೇಶ

ಜಿಯೊಪಾಲಿಟಿಕ್ಸ್ ಆಟ: ಚೀನಾ ತೀರದಿಂದ ಆಸ್ಟ್ರೇಲಿಯದ ಕಲ್ಲಿದ್ದಲನ್ನು ಎತ್ತಲಿದೆ ಭಾರತ

ಚೀನಾದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಕಡಿತವಾಗಿ ಅಲ್ಲಿನ ಕಾರ್ಖಾನೆಗಳು ಮತ್ತು ಜನಜೀನವ ಅಸ್ತವ್ಯಸ್ತವಾಗಿದೆ ಎಂಬುದನ್ನು ಓದಿಯೇ ಇರುತ್ತೀರಿ. ಆದರೆ ಈ ಕಲ್ಲಿದ್ದಿಲಿನ ಅಭಾವ ಎನ್ನುವುದು ಕೇವಲ ಚೀನಾದ ತಲೆಬಿಸಿ ಅಲ್ಲ. ಭಾರತದಲ್ಲೂ ಸಹ ಕಲ್ಲಿದ್ದಿಲಿನ ಪೂರೈಕೆ ಅಷ್ಟು ಸರಾಗವಾಗಿಲ್ಲ. ಶೇ. 70ರಷ್ಟು ವಿದ್ಯುತ್ ಉಷ್ಣವಿದ್ಯುತ್ ಸ್ಥಾವರಗಳಿಂದಲೇ ದೊರೆಯುತ್ತಿರುವ ಭಾರತದಲ್ಲಿ ಕಲ್ಲಿದ್ದಿಲಿನ ಮಹತ್ವ ಸದ್ಯಕ್ಕಂತೂ ದೊಡ್ಡದು.

ಆದರೆ, ಬ್ಲೂಮ್ಬರ್ಗ್ ವರದಿಯನ್ನು ನಂಬುವುದಾದರೆ, ಈ ಹಂತದಲ್ಲಿ ಭಾರತ ತನ್ನ ಕಲ್ಲಿದ್ದಲು ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ಜಿಯೊಪಾಲಿಟಿಕ್ಸ್ ಆಟವನ್ನೇ ಆಡಿದೆ! ಚೀನಾಕ್ಕೆ ಪ್ರಮುಖವಾಗಿ ಕಲ್ಲಿದ್ದಲು ಪೂರೈಸುತ್ತಿದ್ದ ದೇಶ ಆಸ್ಟ್ರೇಲಿಯ. ಕೊರೋನಾ ಶುರುವಾದ ಮೇಲೆ ಆಸ್ಟ್ರೇಲಿಯ ಮತ್ತು ಚೀನಾಗಳ ದ್ವಿಪಕ್ಷೀಯ ಸಂಬಂಧ ಬಿಗಡಾಯಿಸುತ್ತಲೇ ಹೋಯಿತು. ಆಸ್ಟ್ರೇಲಿಯಕ್ಕೆ ಪಾಠ ಕಲಿಸಬೇಕೆಂದು ಚೀನಾ ಅಲ್ಲಿಂದ ಬರುತ್ತಿದ್ದ ಕಲ್ಲಿದ್ದಿಲಿನ ಮೇಲೆ ಪ್ರತಿಬಂಧ ಹೇರಿತು.

ಪರಿಣಾಮವೆಂಬಂತೆ, ಕಲ್ಲಿದ್ದಲು ಹೊತ್ತು ಚೀನಾಕ್ಕೆ ತೆರಳಿದ್ದ ಸುಮಾರು 70 ಹಡಗುಗಳು ಅಲ್ಲಿಯೇ ನಿಲ್ಲುವಂತಾಯಿತು. ಕೆಲವು ದಾಸ್ತಾನು ಮಳಿಗೆಗೆ ಕಲ್ಲಿದ್ದಲನ್ನು ಹಾಕಿದರೂ ಅವು ಅಲ್ಲಿಂದ ಮುಂದಕ್ಕೆ ಹೋಗಲಿಲ್ಲ.

ಬ್ಲೂಮ್ಬರ್ಗ್ ವರದಿಯ ಪ್ರಕಾರ, ಇದೀಗ ಭಾರತದ ಕಂಪನಿಗಳು ಹೀಗೆ ತ್ರಿಶಂಕು ಸ್ಥಿತಿಯಲ್ಲಿ ಚೀನಾ ತೀರದ ಬಳಿಯಲ್ಲಿರುವ ಆಸ್ಟ್ರೇಲಿಯದ ಕಲ್ಲಿದ್ದಿಲಿನ ಬಹುಭಾಗವನ್ನು ತಾವು ಖರೀದಿಸುತ್ತಿವೆ.

ಇದರಿಂದ ಭಾರತಕ್ಕೆ ಕಲ್ಲಿದ್ದಲು ಪೂರೈಕೆ ಆದಂತೆಯೂ ಆಯಿತು. ಮಿತ್ರ ಆಸ್ಟ್ರೇಲಿಯಕ್ಕೆ ನೆರವಾದಂತೆಯೂ ಆಯಿತು. ಜತೆಗೆ ಪರೋಕ್ಷವಾಗಿ ಚೀನಾಕ್ಕೆ “ನಿನ್ನೊಬ್ಬನಿಂದಲೇ ಜಾಗತಿಕ ವ್ಯಾಪಾರದ ಬೇಳೆ ಬೆಯ್ಯುವುದಿಲ್ಲ” ಎಂದಂತೆಯೂ ಆಯಿತು.

ಭಾರತದಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಹೇರಳವಾಗಿಯೇ ಇದ್ದರೂ ಅವುಗಳ ಸಂಸ್ಕರಣೆ ಲಾಗಾಯ್ತಿನಿಂದ ಸರ್ಕಾರಿ ನಿಯಂತ್ರಣದಲ್ಲಿ ಸೊರಗಿತ್ತು. ಇತ್ತೀಚೆಗೆ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆಯಾದರೂ ಅವೆಲ್ಲದರ ಪರಿಣಾಮ ದಾಖಲಾಗುವುದಕ್ಕೆ ಸಮಯ ಹಿಡಿಯಲಿದೆ. ಸದ್ಯಕ್ಕೆ ಭಾರತದ ಶೇಕಡ 80ರಷ್ಟು ಕಲ್ಲಿದ್ದಲು ಸ್ಥಾವರಗಳಲ್ಲಿ ಕೇವಲ ವಾರಕ್ಕಾಗುವಷ್ಟು ಕಲ್ಲಿದ್ದಿಲಿನ ದಾಸ್ತಾನು ಮಾತ್ರವಿದೆ ಎನ್ನಲಾಗಿದೆ.

Sneha Gowda

Recent Posts

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

14 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

30 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

58 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

1 hour ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

1 hour ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

1 hour ago