Categories: ದೇಶ

ಜಾರಿ ನಿರ್ದೇಶನಾಲಯದಿಂದ 363 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ, ; ಸುರಕ್ಷಿತ ಠೇವಣಿ ಅಥವಾ ನಗದು ಪಾವತಿಸದೆ ಚಿನ್ನವನ್ನು ತೆಗೆದುಕೊಂಡು ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆಗೆ 504.34 ಕೋಟಿ ರೂ.ಗಳ ನಷ್ಟ ಉಂಟು ಮಾಡಿದ ಆರೋಪಿಗಳ 363 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಹೈದರಾಬಾದ್‍ನಲ್ಲಿರುವ ಸರ್ಕಾರಿ ಸ್ವಾಮ್ಯದ ಲೋಹ ಮತ್ತು ಖನಿಜ ವ್ಯಾಪಾರ ಸಂಸ್ಥೆ (ಎಂಎಂಟಿಸಿ)ಯ ಅಧಿಕಾರಿಗಳ ಶಾಮೀಲಿನಲ್ಲಿ ಸುಖೇಶ್ ಗುಪ್ತಾ ಅವ್ಯವಹಾರ ಮಾಡಿದ್ದರು ಎಂಬ ಆರೋಪಗಳಿವೆ.
ಅವರಿಗೆ ಸೇರಿದ ಎಂಬಿಎಸ್ ಜ್ಯೂವೇಲರ್ಸ್ ಸಂಸ್ಥೆ, ಎಂಬಿಎಸ್ ಇಂಪೆಕ್ಸ್, ಅನುರಾಗ್ ಗುಪ್ತಾ, ನೀತು ಗುಪ್ತಾ, ವಂದನಾ ಗುಪ್ತಾ ಮತ್ತು ಅವರಿಗೆ ಸೇರಿದ ಇತರ ಸಂಸ್ಥೆಗಳು 45 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲಿಸಿ 2014ರಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಅಗತ್ಯವಾದ ವಿದೇಶಿ ವಿನಿಮಯ ಅಥವಾ ಭದ್ರತಾ ಠೇವಣಿ ಇಲ್ಲದೆ ಸುಖೇಶ್ ಗುಪ್ತಾ ಅವರು ಎಂಎಂಟಿಸಿಯಿಂದ ನಿರಂತರವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿದ್ದರು. ಇದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ 504.34 ಕೋಟಿ ರೂ. ನಷ್ಟವಾಗಿತ್ತು.ನಷ್ಟವನ್ನು ಮುಚ್ಚಿಟ್ಟು ಕೇಂದ್ರ ಕಚೇರಿಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿತ್ತು. ಬಹಳ ವರ್ಷಗಳ ಕಾಲ ಅವ್ಯವಹಾರ ನಡೆದಿದ್ದರಿಂದ ಎಂಎಂಟಿಸಿ ಸಂಸ್ಥೆ ಭರಿಸಲಾರದಷ್ಟು ನಷ್ಟಕ್ಕೆ ಗುರಿಯಾಗಿತ್ತು. ಇನ್ನೊಂದೆಡೆ ಸುಖೇಶ್ ಅವರ ಸಂಸ್ಥೆ ಲಾಭದತ್ತ ಮುನ್ನುಗ್ಗಿತ್ತು. ಆರೋಪಿಗಳ ವಿರುದ್ಧ ಎಂಎಲ್‍ಎ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ನಷ್ಟವನ್ನು ಭರಿಸಲು ಸುಖೇಶ್ ಗುಪ್ತಾರಿಗೆ ಏಕ ತೀರುವಳಿ ಸೌಲಭ್ಯವನ್ನು ನೀಡಲಾಗಿತ್ತು. ಆದರೆ ಅದನ್ನು ಅವರ ಬಳಸಿಕೊಳ್ಳಲಿಲ್ಲ.

Indresh KC

Recent Posts

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

1 hour ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

1 hour ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

2 hours ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

2 hours ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

2 hours ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

3 hours ago