ರಾಜ್ಯಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಈ ಹಿನ್ನೆಲೆ ಭಾರತ್ ಬಯೋಟೆಕ್ನ ಕೋವಾಕ್ಸಿನ್ನ ವಾಣಿಜ್ಯ ರಫ್ತುಗಳನ್ನು ಕೇಂದ್ರವು ಅನುಮೋದಿಸಿದೆ.
ಹೈದರಾಬಾದ್ ಮೂಲದ ಲಸಿಕೆ ತಯಾರಕರು 108 ಲಕ್ಷ ಡೋಸ್ ಕೋವಾಕ್ಸಿನ್ ಅನ್ನು ವಾಣಿಜ್ಯಿಕವಾಗಿ ರಫ್ತು ಮಾಡಲಿದ್ದಾರೆ. ರಫ್ತು ಮಾಡಬೇಕಾದ ಲಸಿಕೆಗಳ ಪ್ರಮಾಣವನ್ನು ಪ್ರತಿ ತಿಂಗಳು ದೇಶೀಯ ಲಭ್ಯತೆಯ ಆಧಾರದ ಮೇಲೆ ಕೇಂದ್ರವು ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೋವಾಕ್ಸಿನ್ ಲಸಿಕೆಯನ್ನು ಎಂಟು ದೇಶಗಳಾದ ಪರಾಗ್ವೆ, ಬೋಟ್ಸ್ವಾನಾ, ವಿಯೆಟ್ನಾಂ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಕ್ಯಾಮರೂನ್ ಮತ್ತು ಯುಎಇ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಕಂಡುಬಂದ 12 ದೇಶಗಳಲ್ಲಿ ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾ ಕೂಡ ಒಂದು. ಆ ದೇಶಕ್ಕೂ ಭಾರತದಿಂದ ಕೋವಾಕ್ಸಿನ್ ರಫ್ತಾಗುತ್ತಿದೆ.
ಕೊವ್ಯಾಕ್ಸಿನ್ ನ್ನು ಜನವರಿ 3 ರಂದು ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾಯಿತು ಮತ್ತು ನವೆಂಬರ್ 3, 2021 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು.