News Karnataka Kannada
Friday, May 03 2024
ದೇಶ

ಕಾಶ್ಮೀರದಲ್ಲಿ ಲಷ್ಕರ್​ ಕಮಾಂಡರ್​ ಸೇರಿ ಮೂವರು ಉಗ್ರರ ಬೇಟೆ

Kashmir Encounter 9 7 21
Photo Credit :

ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾಗಿ ಕಾಶ್ಮೀರ ವಲಯದ ಪೊಲೀಸರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಬುಧವಾರ ಮುಂಜಾನೆಯಿಂದಲೂ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನಚಕಮಕಿ ನಡೆಯುತ್ತಿತ್ತು. ಅಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸ್ಥಳವನ್ನು ಸುತ್ತುವರಿದಿದ್ದರು. ತಮ್ಮನ್ನು ಸೆರೆ ಹಿಡಿಯಲು ಬಂದ ಪೊಲೀಸ್​ ಸಿಬ್ಬಂದಿ ಮೇಲೆ ಭಯೋತ್ಪಾದಕರೂ ಗುಂಡಿನ ದಾಳಿ ನಡೆಸಿದ್ದರು.
ಪಾಕಿಸ್ತಾನದ ಲಷ್ಕರ್​ ಇ ತೊಯ್ಬಾ ಉಗ್ರಸಂಘಟನೆಯ ಕಮಾಂಡರ್​ ಐಜಾಜ್​ ಅಲಿಯಾಸ್​ ಅಬು ಹುರೈರಾ ಮತ್ತು ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಹತ್ಯೆಗೈದಿದ್ದಾಗಿ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಲಷ್ಕರ್​ ಇ ತೊಯ್ಬಾ ಕಮಾಂಡರ್ ಸತ್ತಿದ್ದಕ್ಕೆ ನಿಜಕ್ಕೂ ರಕ್ಷಣಾ ಪಡೆಗಳಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಕಾಶ್ಮೀರ ವಲಯದ ಐಜಿಪಿ ಟ್ವೀಟ್ ಮಾಡಿದ್ದಾರೆ.ಉಗ್ರರು ಅಡಗಿದ್ದಾರೆಂಬ ಮಾಹಿತಿ ಬಂದ ತಕ್ಷಣ ಅವರನ್ನು ಹುಡುಕಿ ಬಂಧಿಸಲು ನಾವು ಹೋಗಿದ್ದು. ಆದರೆ ಅಡಗಿದ್ದ ಉಗ್ರರು ಒಂದೇ ಸಮ ನಮ್ಮ ಮೇಲೆ ದಾಳಿ ಮಾಡಲು ಶುರು ಮಾಡಿದರು. ಅನಿವಾರ್ಯವಾಗಿ ನಾವೂ ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಯಿತು. ಅದು ಎನ್​ಕೌಂಟರ್​ಗೆ ತಿರುಗಿತು ಎಂದು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು