ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾದ ನೌಕರರನ್ನು ಟಾಟಾ ಸಂಸ್ಥೆ ಕನಿಷ್ಠ ಒಂದು ವರ್ಷಗಳ ಕಾಲ ಕೆಲಸದಲ್ಲಿ ಉಳಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಲ್, ಏರ್ ಇಂಡಿಯಾ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ 1 ವರ್ಷ ಯಾವುದೇ ನೌಕರರನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ. ಒಂದು ವರ್ಷದ ಬಳಿಕ ಕೆಲಸದಿಂದ ತೆಗೆದು ಹಾಕುವ ನೌಕರರಿಗೆ ಸ್ವಯಂ ನಿವೃತ್ತಿಯ ಸೌಲಭ್ಯ ಕೊಡಬೇಕು.
ಸದ್ಯ ಏರ್ ಇಂಡಿಯಾದಲ್ಲಿ ಒಟ್ಟು 12,085 ಉದ್ಯೋಗಿಗಳು ಅಂದರೆ 8,084 ಖಾಯಂ ಸಿಬ್ಬಂದಿ ಹಗೂ 4,001 ಗುತ್ತಿಗೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ನಲ್ಲಿ 1,434 ಉದ್ಯೋಗಿಗಳು ಇದ್ದಾರೆ. ಏರ್ ಇಂಡಿಯಾ ಹಸ್ತಾಂತರದ ಬಳಿಕ ಯಾವುದೇ ಸರ್ಕಾರಿ ನೌಕರರಿಗೆ ಏರ್ ಇಂಡಿಯಾದಲ್ಲಿ ಉಚಿತ ವಿಮಾನಯಾನ ಸೇವೆ ಒದಗಿಸಲಾಗುವುದಿಲ್ಲ.
ಟಾಟಾ ಸನ್ಸ್ 18 ಸಾವಿರ ಕೋಟಿ ರೂಪಾಯಿಗೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಬಿಡ್ಡಿಂಗ್ ನಲ್ಲಿ ಗೆದ್ದು ತನ್ನ ಸಂಸ್ಥೆಯನ್ನು ಮತ್ತೆ ಪಡೆದುಕೊಂಡಿದೆ.