ದೆಹಲಿ : ಮೂರು ದಿನಗಳ ಕಾಲ ಅಮೆರಿಕ ಪ್ರವಾಸದ ಬಳಿಕ ಇಂದು ಪ್ರಧಾನಿ ಮೋದಿ 81ನೇ ಆವೃತ್ತಿಯ ಮನ್ ಕಿ ಬಾತ್ ನಡೆಸಲಿದ್ದಾರೆ.
ಆಕಾಶವಾಣಿ ‘ಮನ್ ಕಿ ಬಾತ್’ ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದು, ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿ, ಸಂದೇಶ ನೀಡಲಿದ್ದಾರೆ. ಅಂತೆಯೇ ಈ ತಿಂಗಳ ‘ಮನ್ ಕಿ ಬಾತ್’ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
ವಿಶ್ವ ಸಂಸ್ಥೆಯ 76ನೇ ಉನ್ನತ ಮಟ್ಟದ ಸಭೆಯಲ್ಲಿ ಅಂತಾರಾಷ್ಟ್ರೀಯ ನಾಯಕರು, ರಾಜತಾಂತ್ರಿಕರ ಜೊತೆ ಮಾತುಕತೆ ನಡೆಸಿದರು. ಆಗಸ್ಟ್ ತಿಂಗಳಲ್ಲಿನ ಮನ್ ಕಿ ಬಾತ್ ನಲ್ಲಿ ಯುವ ಕ್ರೀಡಾಪಟುಗಳಿಗೆ ಹಾಗೂ ಯುವ ಜನತೆಯ ಉತ್ಸಾಹವನ್ನು ಕೊಂಡಾಡಿದ್ದರು.
ವಾಷಿಂಗ್ಟನ್ನಲ್ಲಿ ನಡೆದ ಮೊದಲ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿದರು. ಬಳಿಕ ಆಸ್ಟ್ರೇಲಿಯಾದ ಸಹವರ್ತಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡೆ ಸುಗಾರನ್ನು ಕೂಡ ಭೇಟಿಯಾಗಿ ಸಂವಾದ ನಡೆಸಿದರು.