ನಾರ್ವೆ: 2019ರಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ರಷ್ಯನ್ ಸ್ಪೈ ತಿಮಿಂಗಿಲ ಎಂದೇ ಖ್ಯಾತಿ ಪಡೆದಿದ್ದ ಹ್ವಾಲ್ಡಮೀರ್ ನಾರ್ವೆಯ ಬಳಿ ಸಾವನ್ನಪ್ಪಿದೆ.

ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ತಿಮಿಂಗಿಲ 14 ಅಡಿ ಉದ್ದ ಹಾಗೂ 2700 ಪೌಂಡ್​ ತೂಕದಷ್ಟಿತ್ತು ಎಂದು ಹೇಳಲಾಗಿದೆ. 2019ರಲ್ಲಿ ಸೆಂಟ್ ಪೀಟರ್ಸ್​ಬರ್ಗ್​ ಸಲಕರಣೆ ಎಂದು ಲೆಬೇಲ್​ನೊಂದಿಗೆ ಇದು ಮೊದಲ ಬಾರಿ ನಾರ್ವೆಯಲ್ಲಿ ಪತ್ತೆಯಾಗಿತ್ತು. ಅಂದಿನಿಂದಲೂ ಇದು ರಷ್ಯಾ ಬೇಹುಗಾರಿಕೆಗಾಗಿ ಉಪಯೋಗಿಸಿರುವ ತಿಮಿಂಗಿಲ ಎಂದು ಇದಕ್ಕೆ ಹ್ವಾಲ್ಡಮೀರ್ ಎಂದು ನಾಮಕರಣ ಕೂಡ ಮಾಡಲಾಗಿತ್ತು.

ಕೆಲವು ವರದಿಗಳ ಪ್ರಕಾರ ಈ ತಿಮಿಂಗಿಲಿಗೆ ಈ ಹೆಸರು ಬರಲು ಕಾರಣ ಬಹಳ ರೋಚಕವಾಗಿದೆ. ಇದು ರಷ್ಯನ್ ಸ್ಪೈ ತಿಮಿಂಗಲು ಎಂದು ನಂಬಿದ್ದ ಅನೇಕ ರಷ್ಯಾದ ಅಧ್ಯಕ್ಷ ವ್ಲಾಡಮೀರ್​ ಪುಟಿನ್ ಹೆಸರು ಸೇರಿಸಿ ಇದಕ್ಕೆ ಹ್ವಾಲ್ಡಮೀರ್ ಎಂದು ಹೆಸರಿಟ್ಟಿದ್ದಾರೆ ಇಂಗ್ಲಿಷ್​ನ whale ನಿಂದ hvalಲ ತೆಗೆದುಕೊಂಡು vladamir putin ಹೆಸರಿನಿಂದ vladamir ತೆಗೆದುಕೊಂಡು ಹ್ವಾಲ್ಡಮೀರ್ ಎಂದು ಹೆಸರಿನ್ನಿಡಲಾಗಿತ್ತು.

ತಿಮಿಂಗಲ ಅಂದ್ರೆ ಸಾಮಾನ್ಯವಾಗಿ ಮನುಷ್ಯರಿಂದ ಅಂತರ ಕಾಯ್ದುಕೊಂಡು ಆಳ ಸಮುದ್ರದಲ್ಲಿ ಇರುತ್ತವೆ. ಅದರಲ್ಲೂ ಬೆಲುಗಾಸ್​ ಜಾತಿಯ ತಿಮಿಂಗಿಲಗಳು ಆರ್ಕ್​ಟಿಕ್​ನಂತ ಜನನಿಬಿಡ ಇಲ್ಲದ ಪ್ರದೇಶದಲ್ಲಿ ಕಾಣಸಿಗುತ್ತವೆ. ಆದ್ರೆ ಈ ಹ್ವಾಲ್ಡಮೀರ್​ ಮಾತ್ರ ಇವೆಲ್ಲವಕ್ಕಿಂತ ಭಿನ್ನ. ಇದು ಅನೇಕ ಫೋಟೋಗ್ರಾಫರ್​ಗಳಿಗೆ ಪೋಸ್ ಕೊಡುವಷ್ಟು ಮನುಷ್ಯ ಸ್ನೇಹಿಯಾಗಿ ಬದುಕಿತ್ತು. ಹ್ವಾಲ್ಡಮೀರ್ ಸಾವು ಈಗ ಜಾಗತಿಕವಾಗಿ ಸುದ್ದಿಯಾಗಿದೆ. ಹಲವರು ಅದರ ಸಾವಿನ ಬಗ್ಗೆ ಕಂಬನಿ ಮಿಡಿದಿದ್ದಾರೆ.