ಅಮೆರಿಕ :  ಅಮೆರಿಕದ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು ತಗುಲಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದ್ದು, ಪರಿಣಾಮ ಲಾಸ್‌ ವೇಗಾಸ್‌ಗೆ ಚುನಾವಣಾ ಪ್ರಚಾರ ಮೊಟಕುಗೊಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಬೈಡೆನ್ ಅವರ ಆರೋಗ್ಯದ ಬಗ್ಗೆ ವೈಟ್ ಹೌಸ್ ಕೂಡ ಮಾಹಿತಿ ಬಿಡುಗಡೆ ಮಾಡಿದೆ. ಬೈಡೆನ್ ಅವರಿಗೆ ಕೋವಿಡ್ ದೃಢ ಪಡುವುದು ಇದು ಎರಡನೇ ಭಾರಿಯಾಗಿದ್ದು ಈ ಹಿಂದೆ ಜುಲೈ 2022 ರಲ್ಲಿ ಕೂಡ ದೃಢಪಟ್ಟಿತ್ತು.

ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಅವರನ್ನು ಬುಧವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು ಈ ವೇಳೆ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಕೋವಿಡ್ ಸೋಂಕಿಗೆ ತುತ್ತಾಗಿರುವುದು ಖಚಿತವಾದ ಬಳಿಕ ಬೈಡನ್ ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.