News Karnataka Kannada
Tuesday, April 30 2024
ವಿದೇಶ

ಕಾಂಗೋ: ಸೇನಾ ನೇಮಕಾತಿ ವೇಳೆ ಕಾಲ್ತುಳಿತ ಕನಿಷ್ಠ 37 ಮಂದಿ ಸಾವು

Congo: At least 37 killed in stampede during army recruitment
Photo Credit : News Kannada

ಕಾಂಗೋ: ಕಾಂಗೋ ಗಣರಾಜ್ಯದ ರಾಜಧಾನಿ ಬ್ರಝಾವಿಲ್ಲೆಯಲ್ಲಿರುವ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ಅಭಿಯಾನದ ವೇಳೆ ಕಾಲ್ತುಳಿತ ಸಂಭವಿಸಿ ಮೂವತ್ತೇಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ಆಫ್ರಿಕನ್ ರಾಷ್ಟ್ರದ ಕಾಂಗೋ-ಬ್ರಾಝಾವಿಲ್ಲೆ ಸೈನ್ಯವು 18 ರಿಂದ 25 ವಯಸ್ಸಿನ ನಡುವಿನ ವಯಸ್ಸಿನ 1,500 ಜನರನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತು.

ಈ ವೇಳೆ ಸಾವಿರಾರು ಮಂದಿ ಆಯ್ಕೆ ಶಿಬಿರಕ್ಕೆ ಬಂದಿದ್ದು, ಕಾಲ್ತುಳಿತದಿಂದ 37 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಧಾನಿ ಅನಾಟೊಲ್ ಕೊಲಿನೆಟ್ ಮಕೊಸ್ಸೊ, ಹೇಳಿದ್ದಾರೆ. ಘಟನೆ ಬಳಿಕ
ನೇಮಕಾತಿ ಶಿಬಿರವನ್ನು ಬ್ರಝಾವಿಲ್ಲೆಯ ಹೃದಯಭಾಗದಲ್ಲಿರುವ ಮೈಕೆಲ್ ಡಿ’ಒರ್ನಾನೊ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5.8 ಮಿಲಿಯನ್ ಜನರಿರುವ ಕಾಂಗೋ ಗಣರಾಜ್ಯದಲ್ಲಿ ನಿರುದ್ಯೋಗವು ಅತಿರೇಕಕ್ಕೇರಿದೆ. ವಿಶ್ವಬ್ಯಾಂಕ್ ಪ್ರಕಾರ, “75 ಪ್ರತಿಶತ ಕಾಂಗೋಲೀಸ್ ಉದ್ಯೋಗಿಗಳು ಅನೌಪಚಾರಿಕ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು