ರಷ್ಯಾ: ರಾಷ್ಟ್ರದಲ್ಲಿ ಇಳಿಕೆ ಆಗುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ರಷ್ಯಾ ಸರ್ಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಇದೀಗ ಸಂತಾನೋತ್ಪತ್ತಿ ದರವನ್ನು ಹೆಚ್ಚಿಸಲು ಅಂತಹದೇ ಹೊಸ ಆಫರ್‌ ಒಂದನ್ನು 25 ವರ್ಷದೊಳಗಿನ ಕಾಲೇಜು ಯುವತಿಯರಿಗೆ ನೀಡಿದೆ.

ಯುವತಿಯರು ಆರೋಗ್ಯವಂತ ಮಕ್ಕಳನ್ನು ಹೆತ್ತರೆ ಭರ್ಜರಿ ಹಣವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಕುರಿತ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದೆ. ರಷ್ಯಾದ ವಾಯವ್ಯ ಪ್ರದೇಶವಾದ ರಿಪಬ್ಲಿಕ್‌ ಆಫ್‌ ಕರೇಲಿಯಾದಲ್ಲಿ ಇಲ್ಲಿನ ಸ್ಥಳೀಯ ಅಧಿಕಾರಿಗಳು ಸಂತಾನೋತ್ಪತ್ತಿ ದರವನ್ನು ಹೆಚ್ಚಿಸಲು ಹೊಸ ಯೋಜನೆಯೊಂದನ್ನು ರೂಪಿಸಿದೆ.

ಸ್ಥಳೀಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 25 ವರ್ಷದೊಳಗಿನ ಯುವತಿಯರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರೆ ಅವರಿಗೆ ರೂ. 92 ಸಾವಿರ ($ 1,100 ಡಾಲರ್)‌ ಬಹುಮಾನ ನೀಡಲಾಗುವುದು ಎಂದು ಬಂಪರ್‌ ಆಫರ್‌ ಒಂದನ್ನು ಘೋಷಿಸಿದೆ. ಫಲವತ್ತತೆಯ ಪ್ರಮಾಣ ಹೆಚ್ಚಿಸಲು ಪರಿಚಯಿಸಿರುವ ಈ ಯೋಜನೆ ಮುಂದಿನ ವರ್ಷ ಜನವರಿ 01 ರಿಂದ ಜಾರಿಗೆ ಬರಲಿದೆ.