News Karnataka Kannada
Wednesday, May 01 2024
ವಿದೇಶ

ಕಾಲರಾ ಭಯದಿಂದ ವಲಸೆ ಹೋಗುವಾಗ ಹಡಗು ಮುಳುಗಡೆ: 94 ಮಂದಿ ದಾರುಣ ಸಾವು

ಕಾಲರಾ ರೋಗದಿಂದ ಹೆದರಿ ಜೀವ ಉಳಿಸಿಕೊಳ್ಳುವ ಸುಲುವಾಗಿ ವಲಸೆ ಹೊರಟ ಆಫ್ರಿಕಾದ ಜನರು ಹಡಗು ಮುಳುಗಡೆಗೊಂಡು 94 ಮಂದಿ ದಾರುಣವಾಗಿ ಸಾವನಪ್ಪಿದ್ದಾರೆ. ಈ ಘಟನೆ ಮೊಜಾಂಬಿಕ್‌ ದೇಶದಲ್ಲಿ ನಡೆದಿದೆ.
Photo Credit : NewsKarnataka

ಮೊಜಾಂಬಿಕ್‌:   ಕಾಲರಾ ರೋಗದಿಂದ ಹೆದರಿ ಜೀವ ಉಳಿಸಿಕೊಳ್ಳುವ ಸುಲುವಾಗಿ ವಲಸೆ ಹೊರಟ ಆಫ್ರಿಕಾದ ಜನರು ಹಡಗು ಮುಳುಗಡೆಗೊಂಡು 94 ಮಂದಿ ದಾರುಣವಾಗಿ ಸಾವನಪ್ಪಿದ್ದಾರೆ. ಈ ಘಟನೆ ಮೊಜಾಂಬಿಕ್‌ ದೇಶದಲ್ಲಿ ನಡೆದಿದೆ.

ಮೊಜಾಂಬಿಕ್‌ ದೇಶದಲ್ಲಿ ಇತ್ತೀಚಿಗೆ ಕಾಲರಾ ರೋಗದ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹಲವಾರು ಜನರನ್ನು ಬಲಿ ಪಡೆದಿದ್ದು, ಸಾವಿನ ಸರಣಿಯಿಂದ ತಪ್ಪಿಸಿಕೊಳ್ಳಲು ಜನ ಊರಿಗೆ ಊರನ್ನೇ ಖಾಲಿ ಮಾಡಿಕೊಂಡು ವಲಸೆ ಹೊರಟಿದ್ದಾರೆ.

ಮೀನುಗಾರರ ಹಡಗಿನಲ್ಲಿ ನೂರಾರು ಜನರು ಗುಳೆ ಹೋಗುವಾಗ ಹಡಗು ಮಗುಚಿ ಬಿದ್ದಿದೆ. ಮಕ್ಕಳು ಸೇರಿದಂತೆ 94 ಮಂದಿ ಸಾವನ್ನಪ್ಪಿದ್ದು, 26 ಮಂದಿ ನಾಪತ್ತೆಯಾಗಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಜನರನ್ನು ಹಡಗಿನಲ್ಲಿ ಹೊತ್ತುಕೊಂಡು ಹೋಗುತ್ತಾ ಇದ್ದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಮೀನುಗಾರರು ಬಳಸುತ್ತಿದ್ದ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ವಲಸೆ ಹೋಗುವಾಗ ದುರಂತಕ್ಕೀಡಾಗಿದೆ. ಮೊಜಾಂಬಿಕ್ ದೇಶದಲ್ಲಿ ಕಾಲರಾ ಬಂದಾಗ ಒಂದು ಪ್ರದೇಶದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಒಂದೇ ಬಾರಿ ನೂರಾರು ಜನ ಪ್ರಾಣ ಬಿಟ್ಟಿರೋದು ಇದೇ ಮೊದಲ ಬಾರಿಯಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು