ಲಂಡನ್: ಬ್ರಿಟನ್​ನಲ್ಲಿ 14 ವರ್ಷಗಳ ಬಳಿಕ ಸರ್ಕಾರ ಬದಲಾಗಿದೆ. ಇದರೊಂದಿಗೆ ರಾಜಕೀಯ ಮಾತ್ರವಲ್ಲ, ಪ್ರಧಾನಿ ಕಚೇರಿಯಲ್ಲೂ ಆಸಕ್ತಿಕರ ಸಂಗತಿಗಳು ಗಮನ ಸೆಳೆಯುತ್ತಿವೆ. ಡೌನಿಂಗ್ ಸ್ಟ್ರೀಟ್​ನ ‘ಲ್ಯಾರಿ’ ಬೆಕ್ಕು ತನ್ನ ಆರನೇ ಪ್ರಧಾನಿಯನ್ನು ಸ್ವಾಗತಿಸಲು ಸಿದ್ಧವಾಗಿದೆ.

‘ಚೀಫ್ ಮೌಸರ್’ ಇದುವರೆಗೆ ಕನ್ಸರ್ವೇಟಿವ್ ಪಕ್ಷದ ಐವರು ಪ್ರಧಾನಿಗಳನ್ನು ಕಂಡಿದೆ. ಈಗ ಲೇಬರ್​ ಪಕ್ಷದ ನಾಯಕನೊಂದಿಗೆ ತನ್ನ ಮೊದಲ ಪ್ರಯಾಣ ಆರಂಭಿಸಲಿದೆ.

10 ಡೌನಿಂಗ್ ಸ್ಟ್ರೀಟ್’ ಲಂಡನ್‌ನಲ್ಲಿದೆ. ಇದು ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಅಧಿಕೃತ ನಿವಾಸ ಮತ್ತು ಕಚೇರಿ. ಪಿಎಂ ನಿವಾಸದ ಅಧಿಕೃತ ಬೆಕ್ಕಿನ ಹೆಸರೇ ‘ಚೀಫ್ ಮೌಸರ್’. 2011ರಲ್ಲಿ ಮೊದಲ ಬಾರಿಗೆ ‘ಚೀಫ್ ಮೌಸರ್’ ಪರಿಚಯಿಸಲಾಗಿದೆ. ‘ಚೀಫ್ ಮೌಸರ್’ ಆಗಿ ‘ಲ್ಯಾರಿ’ ಪ್ರಸಿದ್ಧಿ ಪಡೆದಿದೆ. ’10 ಡೌನಿಂಗ್ ಸ್ಟ್ರೀಟ್’ನ ಬಾಗಿಲಿನಲ್ಲಿ ಕಾಣಿಸಿಕೊಳ್ಳುವ ಬ್ರಿಟನ್ ಜನರ ಹೃದಯ ಗೆಲ್ಲುತ್ತದೆ. ಈಗ ಡೌನಿಂಗ್ ಸ್ಟ್ರೀಟ್​ನಲ್ಲಿ ಕೀರ್ ಸ್ಟಾರ್ಮರ್ ಅವರನ್ನು ‘ಲ್ಯಾರಿ’ ಪ್ರಧಾನಿಯಾಗಿ ನೋಡಲಿದೆ.

ಇನ್ನು ಪಿಎಂ ನಿವಾಸದಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಾ, ಭದ್ರತಾ ರಕ್ಷಣೆ ಪರಿಶೀಲನೆ ಹಾಗೂ ಪುರಾತನ ಪೀಠೋಪಕರಣಗಳ ಪರೀಕ್ಷಿಸುವುದು ‘ಲ್ಯಾರಿ’ ದಿನಚರಿಯಾಗಿದೆ.