ಇಸ್ಲಮಾಬಾದ್: ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಅಸಿಮ್ ಮುನೀರ್ ಅವರ ಸೈನ್ಯವನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಮೂರು ಸ್ಪೋಟಗಳೂ ಉಂಟಾಗಿದೆ ಎನ್ನಲಾಗುತ್ತಿದೆ.
ಶನಿವಾರ, ಕಲಾತ್ ಜಿಲ್ಲೆಯ ಮಂಗೋಚಾರ್ ಅಣೆಕಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸತತ ಮೂರು ಸ್ಪೋಟಗಳು ಆಗಿರುವ ಕಾರಣದಿಂದ 8 ಪಾಕಿಸ್ತಾನಿ ಸೈನಿಕರು ಮೃತರಾಗಿದ್ಧಾರೆ ಎನ್ನಲಾಗುತ್ತಿದ್ದು, ಕೆಲ ಮೂಲಗಳ ಪ್ರಕಾರ ಬರೀ ಗಾಯಗೊಂಡಿದ್ದಾರೆ. ಸದ್ಯ ಇಡೀ ಪ್ರದೇಶದಲ್ಲಿ ಉದ್ವಿಘ್ನತೆ ಉಂಟಾಗಿದ್ದು, ಜನ ಭಯದ ನೆರಳಲ್ಲಿ ಬದುಕುತ್ತಿದ್ದಾರೆ.
ಕೆಲ ಮೂಲಗಳ ಪ್ರಕಾರ ಈ ಸ್ಪೋಟಗಳನ್ನ ರೈಲನ್ನ ಟಾರ್ಗೆಟ್ ಮಾಡಿ ಮಾಡಲಾಗಿದೆ. ರೈಲ್ವೆ ಹಳಿಯಲ್ಲಿ ಸಂಭವಿಸಿದ ಭಾರಿ ಸ್ಫೋಟವು ಚಲಿಸುತ್ತಿದ್ದ ರೈಲಿನ ಆರು ಬೋಗಿಗಳನ್ನು ಹಳಿತಪ್ಪಿತ್ತು. ಈ ರೀತಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಳೆದ 4 ತಿಂಗಳಲ್ಲಿ 2 ದಾಳಿಗಳಾಗಿದೆ. . ಅದೃಷ್ಟವಶಾತ್ ರೈಲು ಪಾಸ್ ಆದ ನಂತರ ದಾಳಿ ಆಗಿದ್ದು, ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗುತ್ತಿದೆ.

